ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ನೋಂದಣಿ ಉಚಿತ
ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ನೋಂದಣಿ ಉಚಿತ|T G Srinidhi / ejnana.com
ಸುದ್ದಿ

ಮೈಸೂರಿನಲ್ಲಿ ವಿಜ್ಞಾನ ಸಂವಹನ ಸಮಾವೇಶ: ನೋಂದಣಿ ಆರಂಭ

'ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಮತ್ತು ನಾಳೆಯ ನಡೆಗಳು' ಕುರಿತು ರಾಜ್ಯ ಮಟ್ಟದ ಸಮಾವೇಶ

ಇಜ್ಞಾನ ತಂಡ

ಮೈಸೂರಿನ ಸಿಎಸ್ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ನವದೆಹಲಿಯ ವಿಜ್ಞಾನಪ್ರಸಾರ್ ನೆರವಿನೊಂದಿಗೆ ಮೈಸೂರಿನಲ್ಲಿ ಇದೇ ಸೆಪ್ಟೆಂಬರ್ ೨೦-೨೧ರಂದು 'ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಮತ್ತು ನಾಳೆಯ ನಡೆಗಳು' ಎನ್ನುವ ವಿಷಯದ ಕುರಿತು ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸುತ್ತಿವೆ.

ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಆಸಕ್ತರಾಗಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ವ್ಯಕ್ತಿಗಳು ಹಾಗೂ ಪ್ರಕಾಶಕರಿಗೆ ಕನ್ನಡದಲ್ಲಿ ವಿಜ್ಞಾನ ಸಂವಹನ ಕುರಿತು ಚರ್ಚಿಸಲು ಇದು ವೇದಿಕೆಯನ್ನು ಒದಗಿಸಲಿದೆ.

ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ನೋಂದಣಿ ಉಚಿತವಾಗಿದ್ದು, ಸೀಮಿತ ಸಂಖ್ಯೆಯ ಅವಕಾಶಗಳು ಇರುವುದರಿಂದ ಆಸಕ್ತರು ಮುಂದಾಗಿಯೇ http://bit.ly/2kp5pF7 ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬಹುದು. ಸೆಪ್ಟೆಂಬರ್ ೧೫, ೨೦೧೯ ನೋಂದಣಿಗೆ ಕಡೆಯ ದಿನ. ಆಯ್ಕೆಯ ಬಗ್ಗೆ ೧೮ನೇ ತಾರೀಖಿನ ವೇಳೆಗೆ ವೈಯಕ್ತಿಕವಾಗಿ ಇ-ಮೇಲ್ ಇಲ್ಲವೇ ಫೋನಿನ ಮೂಲಕ ತಿಳಿಸಲಾಗುವುದು.

ಹೆಚ್ಚಿನ ವಿವರಗಳಿಗೆ ಶ್ರೀ ಶರ್ಮ, ದೂರವಾಣಿ ಸಂಖ್ಯೆ ೯೮೮೬೬೪೦೩೨೮ ಅಥವಾ iandp.cftri@gmail.com ಇವರನ್ನು ಸಂಪರ್ಕಿಸಬಹುದೆಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ (ಸಿಎಫ್‌ಟಿಆರ್‌ಐ) ಪ್ರಕಟಣೆ ತಿಳಿಸಿದೆ.

ಇಜ್ಞಾನ Ejnana
www.ejnana.com