ಪ್ರೊ. ಜೆ. ಆರ್. ಲಕ್ಷ್ಮಣರಾಯರು
ಪ್ರೊ. ಜೆ. ಆರ್. ಲಕ್ಷ್ಮಣರಾಯರುಶ್ರೀ ಜೆ. ಎಲ್. ಅನಿಲ್ ಕುಮಾರ್

ಜೆಆರ್‌ಎಲ್ ನೂರರ ನೆನಪು: "ಆಗುತ್ತಿರುವ ಕೆಲಸದಲ್ಲಿ ಹೆಚ್ಚು ಜನ ಆಸಕ್ತರಾಗಬೇಕು"

ಇಂದು (೨೧.೦೧.೨೧) ಕನ್ನಡದ ಪ್ರಮುಖ ವಿಜ್ಞಾನ ಸಂವಹನಕಾರರಲ್ಲೊಬ್ಬರಾಗಿದ್ದ ಪ್ರೊ. ಜೆ. ಆರ್. ಲಕ್ಷ್ಮಣರಾಯರ ನೂರನೇ ಜನ್ಮದಿನ. ಈ ಹಿಂದೆ ಅವರು ನಮಗೆ ನೀಡಿದ್ದ ಕಿರುಸಂದರ್ಶನವನ್ನು ಮರುಪ್ರಕಟಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳಲು ನಮಗೆ ಹೆಮ್ಮೆ.

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?

ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ವಿದ್ಯಾಗುರುಗಳಾಗಿದ್ದ ಕುವೆಂಪು ವಿಜ್ಞಾನ ಸಂವಹನದಲ್ಲಿ ತೊಡಗಿಕೊಳ್ಳುವುದು ವಿಜ್ಞಾನದಲ್ಲಿ ವಿಶೇಷ ಅಧ್ಯಯನ ಮಾಡಿದವರ ಆದ್ಯ ಕರ್ತವ್ಯ ಎಂದು ಹೇಳುತ್ತಿದ್ದರು. ನಾನು ವಿಜ್ಞಾನ ಸಂವಹನ ಕ್ಷೇತ್ರಕ್ಕೆ ಬರಲು ಇದು ಮುಖ್ಯ ಕಾರಣ ಎನ್ನಬಹುದು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?

ಆಕಾಶವಾಣಿಯ ನಿರ್ದೇಶಕರಾಗಿದ್ದ ಡಾ. ಎಚ್. ಆರ್. ಕೃಷ್ಣಮೂರ್ತಿ, ಅಡ್ಯನಡ್ಕ ಕೃಷ್ಣಭಟ್, ಮನೋವಿಜ್ಞಾನ ಕ್ಷೇತ್ರದಲ್ಲಿ ದುಡಿದ ಡಾ. ಸಿ. ಆರ್. ಚಂದ್ರಶೇಖರ್ ಮುಂತಾದವರ ಕೆಲಸವನ್ನು ನಾನು ಮೆಚ್ಚುತ್ತೇನೆ.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ?

ನನಗೆ ಕಾಣುವಂತೆ ಸಮಾಜದಿಂದ ನಮಗೆ ಉತ್ತೇಜನ ದೊರೆಯುತ್ತಿದೆ.

ನಿಮ್ಮ ಅನಿಸಿಕೆಯಂತೆ ಈ ಕ್ಷೇತ್ರದಲ್ಲಿ ಆಗಬೇಕಿರುವ ಮುಂದಿನ ಕೆಲಸ ಏನು?

"ಮುಂದಿನ ಕೆಲಸ" ಎಂಬುದು ನನಗೆ ಯಾವುದೂ ಕಾಣಿಸುತ್ತಿಲ್ಲ. ಆದರೆ ಈಗ ಆಗುತ್ತಿರುವ ಕೆಲಸದಲ್ಲಿ ಇನ್ನೂ ಹೆಚ್ಚು ಜನ ಆಸಕ್ತರಾಗಬೇಕು.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?

ಓದುವುದು, ಶಾಸ್ತ್ರೀಯ ಸಂಗೀತ ಆಲಿಸುವುದು , ಅದರಲ್ಲೂ ಕರ್ನಾಟಕ ಶಾಸ್ತ್ರೀಯ ಸಂಗೀತ.

Related Stories

No stories found.
logo
ಇಜ್ಞಾನ Ejnana
www.ejnana.com