ಓದುವುದು ಬೇಜಾರು ಎನ್ನುವವರಿಗೆ ಸುಲಭ ಹಾಗೂ ಪರ್ಯಾಯ ಒದಗಿಸುವುದು ಧ್ವನಿರೂಪದ ಮಾಹಿತಿಯ ಹೆಗ್ಗಳಿಕೆ.
ಓದುವುದು ಬೇಜಾರು ಎನ್ನುವವರಿಗೆ ಸುಲಭ ಹಾಗೂ ಪರ್ಯಾಯ ಒದಗಿಸುವುದು ಧ್ವನಿರೂಪದ ಮಾಹಿತಿಯ ಹೆಗ್ಗಳಿಕೆ.Image by Csaba Nagy from Pixabay

ಕನ್ನಡದ ಇಜ್ಞಾನ: ಜಾಲಲೋಕದಲ್ಲಿ ಕನ್ನಡದ ಧ್ವನಿ

ಓದುವುದು ಬೇಜಾರು ಎನ್ನುವವರಿಗೆ ಸುಲಭ ಪರ್ಯಾಯ ಒದಗಿಸುವ 'ಪಾಡ್‌ಕಾಸ್ಟ್'ಗಳು ಇದೀಗ ಕನ್ನಡದಲ್ಲೂ ದೊರಕುತ್ತಿವೆ.

ಓದುವುದು ಬೇಜಾರು ಎನ್ನುವವರಿಗೆ ಸುಲಭ ಹಾಗೂ ಸಮರ್ಥ ಪರ್ಯಾಯ ಒದಗಿಸುವುದು ಧ್ವನಿರೂಪದ ಮಾಹಿತಿಯ ಹೆಗ್ಗಳಿಕೆ. 'ಪಾಡ್ ಕಾಸ್ಟ್' ಎಂದೂ ಕರೆಸಿಕೊಳ್ಳುವ ಈ ಬಗೆಯ ಮಾಹಿತಿ ಇದೀಗ ಕನ್ನಡ ಭಾಷೆಯಲ್ಲೂ ದೊರಕುತ್ತಿದೆ. ಇಂತಹ ಮಾಹಿತಿ ಪ್ರಕಟಿಸುತ್ತಿರುವ ಮೂರು ವಿನೂತನ ಪ್ರಯತ್ನಗಳ ಪರಿಚಯ ಇಲ್ಲಿದೆ.

ಹಿರಿಯ ವಿಜ್ಞಾನ ಸಂವಹನಕಾರ ಕೊಳ್ಳೇಗಾಲ ಶರ್ಮ ಈ ಕಾರ್ಯಕ್ರಮವನ್ನು ಎರಡೂವರೆ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
ಹಿರಿಯ ವಿಜ್ಞಾನ ಸಂವಹನಕಾರ ಕೊಳ್ಳೇಗಾಲ ಶರ್ಮ ಈ ಕಾರ್ಯಕ್ರಮವನ್ನು ಎರಡೂವರೆ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.ಜಾಣಸುದ್ದಿ / techkannada.in

ವಿಜ್ಞಾನ ಜಗತ್ತಿನ ಆಗುಹೋಗುಗಳನ್ನು ಪ್ರತಿದಿನವೂ ಪರಿಚಯಿಸುತ್ತಿರುವ ಕನ್ನಡ ಧ್ವನಿ ಪತ್ರಿಕೆ (ಪಾಡ್‌ಕಾಸ್ಟ್) 'ಜಾಣ ಸುದ್ದಿ'. ಹಿರಿಯ ವಿಜ್ಞಾನ ಸಂವಹನಕಾರರಾದ ಕೊಳ್ಳೇಗಾಲ ಶರ್ಮ ಅವರು ಈ ಕಾರ್ಯಕ್ರಮವನ್ನು ಕಳೆದ ಎರಡೂವರೆ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕತೆ ಮತ್ತು ಉದಾಹರಣೆಗಳ ನೆರವಿನಿಂದ ವಿವರಿಸುವ ಜೊತೆಗೆ, ಪ್ರತಿದಿನವೂ ಹೊಸ ವಿಷಯಗಳನ್ನು ತಿಳಿಸುತ್ತಿರುವುದು ವಿಶೇಷ. ಜಾಣ ಸುದ್ದಿಯನ್ನು ವಾಟ್ಸ್ ಆಪ್ ಮೂಲಕವೇ ಪಡೆಯಲು ಸಾಧ್ಯ. 'ಟೆಕ್ ಕನ್ನಡ' ತಾಣ ಹಾಗೂ ಡೆವೆಲಪ್ ಸ್ಕೂಲ್ಸ್‌ನ ಯೂಟ್ಯೂಬ್ ವಾಹಿನಿಯಲ್ಲೂ ಜಾಣಸುದ್ದಿಯ ಸಂಚಿಕೆಗಳು ದೊರಕುತ್ತವೆ.

ಕೊಂಡಿಗಳು: ಟೆಕ್ ಕನ್ನಡದಲ್ಲಿ ಜಾಣಸುದ್ದಿ | ಯೂಟ್ಯೂಬ್‌ನಲ್ಲಿ ಜಾಣಸುದ್ದಿ

ವಾಟ್ಸ್‌ಆಪ್‌ ಮೂಲಕ ಜಾಣಸುದ್ದಿ ಪಡೆಯುವುದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ, ನೋಂದಾಯಿಸಿಕೊಳ್ಳಿ!

ಮಕ್ಕಳಿಗೆ ಕತೆ ಹೇಳಲು ಬಿಡುವಿಲ್ಲದಿದ್ದವರು ಕೈಗೆ ಮೊಬೈಲ್ ಕೊಟ್ಟುಬಿಡುವುದು ಸಾಮಾನ್ಯ. ಈಗ ಮಕ್ಕಳು ಆ ಮೊಬೈಲಿನಲ್ಲೇ ಕನ್ನಡದ ಕತೆಗಳನ್ನು ಕೇಳಬಹುದು. 'ಕೇಳಿರೊಂದು ಕಥೆಯ' ಎಂಬ ಹೆಸರಿನ ಜಾಲತಾಣದಲ್ಲಿ ಕನ್ನಡದ ಹಲವಾರು ಮಕ್ಕಳ ಕತೆಗಳನ್ನು ಧ್ವನಿರೂಪದಲ್ಲಿ (ಪಾಡ್‌ಕಾಸ್ಟ್) ಪ್ರಕಟಿಸಲಾಗಿದೆ. ಜಾಲತಾಣದಲ್ಲಿ ಮಾತ್ರವೇ ಅಲ್ಲದೆ ಈ ಕತೆಗಳು ಗೂಗಲ್ ಪಾಡ್‌ಕಾಸ್ಟ್ಸ್ ಹಾಗೂ ಆಪಲ್ ಪಾಡ್‌ಕಾಸ್ಟ್ಸ್‌ನಂತಹ ವ್ಯವಸ್ಥೆಗಳಲ್ಲೂ ಲಭ್ಯವಿರುವುದು ವಿಶೇಷ. ಕತೆಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಂಡು ಅಂತರಜಾಲ ಸಂಪರ್ಕವಿಲ್ಲದಾಗಲೂ ಕೇಳುವುದು ಸಾಧ್ಯ.

ಜಾಲತಾಣದ ಕೊಂಡಿ: ಕೇಳಿರೊಂದು ಕಥೆಯ

ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಪಾಡ್‌ಕಾಸ್ಟ್‌ಗಳನ್ನು ಪ್ರಕಟಿಸುತ್ತಿರುವ ತಾಣ 'ನಲ್ಲಿಕಾಯಿ'. ಓದುವುದು ಕಷ್ಟ ಎನ್ನುವವರೂ ಸಾಹಿತ್ಯ ಸಂಬಂಧಿ ವಿಷಯಗಳನ್ನು ತಿಳಿಯಬೇಕು, ಮತ್ತು ಆನಂದಿಸಬೇಕು ಎನ್ನುವುದು ಈ ಪ್ರಯತ್ನದ ಉದ್ದೇಶ. ನಾಲ್ಕು ವರ್ಷಗಳಿಂದ ಸುದ್ದಿ ನೀಡುತ್ತಾ ಬಂದಿರುವ 'ನಲ್ಲಿಕಾಯಿ' ಸಂಚಿಕೆಗಳನ್ನು ಅದರ ಜಾಲತಾಣದ ಮೂಲಕ ಕೇಳಬಹುದು. ಹೊಸ ಬ್ಲಾಗರ್‌ಗಳನ್ನೂ ಧ್ವನಿ ಮಾಧ್ಯಮಕ್ಕೆ ಪರಿಚಯಿಸುವ, ಅವರ ಪಾಡ್‌ಕಾಸ್ಟ್‌ಗಳನ್ನು ಪ್ರಕಟಿಸಲು ವೇದಿಕೆ ನೀಡುವ ಸದಾಶಯ ನಲ್ಲಿಕಾಯಿ ತಂಡದ್ದು.

ಜಾಲತಾಣದ ಕೊಂಡಿ: ನಲ್ಲಿಕಾಯಿ

ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!
ಇಲ್ಲಿ ಹೇಳಿರುವ ಉದಾಹರಣೆಗಳ ಜೊತೆಗೆ ಇನ್ನೂ ಕೆಲವು ಪಾಡ್‌ಕಾಸ್ಟ್‌ಗಳು ಕನ್ನಡದಲ್ಲಿವೆ. ಅವುಗಳಲ್ಲಿ ಪೈಕಿ ನಿಮಗಿಷ್ಟವಾದವು ಯಾವುವು? ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!

Related Stories

No stories found.
logo
ಇಜ್ಞಾನ Ejnana
www.ejnana.com