ಯೂಟ್ಯೂಬ್‌ನಲ್ಲಿ ಉಪಯುಕ್ತ ಮಾಹಿತಿಯೂ ಇದೆ!
ಯೂಟ್ಯೂಬ್‌ನಲ್ಲಿ ಉಪಯುಕ್ತ ಮಾಹಿತಿಯೂ ಇದೆ!Image by Gerd Altmann from Pixabay

ಕನ್ನಡದ ಇಜ್ಞಾನ: ಯೂಟ್ಯೂಬ್‌ನಲ್ಲಿ ಕನ್ನಡದ ಕಂಪು

ಯೂಟ್ಯೂಬ್‌ನಲ್ಲಿ ವೀಡಿಯೊ ನೋಡುತ್ತ ಕುಳಿತರೆ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಆರೋಪ. ಅಲ್ಲಿ ಉಪಯುಕ್ತ ಮಾಹಿತಿಯೂ ಇದೆ!

ಯೂಟ್ಯೂಬ್ ಬಳಕೆ ಎಷ್ಟು ಮನರಂಜನೀಯವೊ ಅಷ್ಟೇ ಮಾಹಿತಿದಾಯಕವೂ ಆಗಿದೆ, ಆದರೆ ಈ ಮಾತು ಎಲ್ಲಾ ಸಂದರ್ಭದಲ್ಲೂ ಅನ್ವಯವಾಗುವುದಿಲ್ಲ. ಅದಕ್ಕೆ ಕಾರಣ ವಿಚಾರಗಳ ಉತ್ಪ್ರೇಕ್ಷೆ ಮತ್ತು ನಕಲಿ ಸುದ್ದಿಗಳ ಹಾವಳಿ. ಇದರ ನಡುವೆ ಯೂಟ್ಯೂಬ್‌ನಲ್ಲಿ ಉಪಯುಕ್ತ ಮಾಹಿತಿಗಳಿಗೇನೂ ಕೊರತೆಯಿಲ್ಲ ಎಂಬುದನ್ನು ತೋರಿಸುವ ಪ್ರಯತ್ನಗಳೂ ನಡೆದಿವೆ. ಅಂತಹ ಮೂರು ಪ್ರಯತ್ನಗಳ ಪರಿಚಯ ಇಲ್ಲಿದೆ.

ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ 'ಸಂವಾದ' ಯೂಟ್ಯೂಬ್ ಚಾನಲ್
ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ 'ಸಂವಾದ' ಯೂಟ್ಯೂಬ್ ಚಾನಲ್Samvada ಸಂವಾದ

ಆಹಾರ, ಆರ್ಥಿಕತೆ, ವಿಜ್ಞಾನ, ತಂತ್ರಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಿಸಿಂತೆ ಆಯಾ ಕ್ಷೇತ್ರದ ಪರಿಣತರನ್ನು ಮಾತನಾಡಿಸಿ, ಅವರ ಮಾತಿಗೆ ಪೂರಕ ಚಿತ್ರಗಳನ್ನು ಸೇರಿಸಿ ವೀಡಿಯೊ ರೂಪದಲ್ಲಿ ಪ್ರಸಾರ ಮಾಡುತ್ತಿರುವುದು 'ಸಂವಾದ' ಯೂಟ್ಯೂಬ್ ಚಾನಲ್. ವಿಶ್ವ ಸಂವಾದ ಕೇಂದ್ರದ ಭಾಗವಾಗಿರುವ 'ಸಂವಾದ' ತನ್ನ ವೀಡಿಯೊಗಳ ಮೂಲಕ ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಸಂವಾದ ಎಂಬ ಜಾಲತಾಣ ಹಾಗೂ ಫೇಸ್‌ಬುಕ್ ಪುಟ ಕೂಡ ಕಾರ್ಯನಿರ್ವಹಿಸುತ್ತಿದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್, ಕಂಪ್ಯೂಟರ್, ಸಾಫ್ಟ್‌ವೇರ್ ಮುಂತಾದವುಗಳ ಬಗ್ಗೆ ವಿಮರ್ಶೆ ಮತ್ತು ವಿವರಣೆಯೊಂದಿಗಿನ ವಿಡಿಯೋಗಳನ್ನು ನೀಡುತ್ತಾ ಬಂದಿರುವುದು 'ಟೆಕ್ ಇನ್ ಕನ್ನಡ' ಯೂಟ್ಯೂಬ್ ಚಾನಲ್. ಮಾರುಕಟ್ಟೆಗೆ ಬರುವ ಹೊಸ ಗ್ಯಾಜೆಟ್‌ಗಳ ಬೆಲೆ, ವೈಶಿಷ್ಟ್ಯಗಳ ಕುರಿತು ವಿವರವಾದ ಮಾಹಿತಿ ಈ ಚಾನಲ್‌ನಲ್ಲಿ ಸಿಗುತ್ತದೆ. ಇದಕ್ಕೆ ಪೂರಕವಾಗಿ ಟೆಕ್ ಇನ್ ಕನ್ನಡ ಎಂಬ ಜಾಲತಾಣ ಕೂಡ ಕಾರ್ಯನಿರ್ವಹಿಸುತ್ತಿದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್ ಹೇಗೆ ಕೆಲಸ ಮಾಡುತ್ತದೆ?, ಸೋಲಾರ್ ಸೆಲ್ ಗಳ ಒಳಗೇನಿದೆ?, ಹೆಲಿಕಾಪ್ಟರ್ ಹೇಗೆ ಹಾರುತ್ತೆ ಗೊತ್ತಾ? ಹೀಗೆ ಕುತೂಹಲ ಹೆಚ್ಚಿಸುವಂತಹ, ನಿತ್ಯ ಜೀವನಕ್ಕೆ ಹತ್ತಿರವಾದ ವಿಷಯಗಳ ಕುರಿತು ವಿವರವಾದ ಮಾಹಿತಿಯೊಂದಿಗಿನ ವೀಡಿಯೊಗಳು 'ತಿಳಿ' ಯೂಟ್ಯೂಬ್ ಚಾನಲ್‌ನಲ್ಲಿ ಪ್ರಕಟವಾಗುತ್ತಿವೆ. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹರಡುವ ಉದ್ದೇಶದೊಂದಿಗೆ ಈ ಚಾನಲ್ ಕಾರ್ಯನಿರ್ವಹಿಸುತ್ತಿದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!
ಇಲ್ಲಿ ಹೇಳಿರುವ ಉದಾಹರಣೆಗಳ ಜೊತೆಗೆ ಇನ್ನೂ ಕೆಲವು ಯೂಟ್ಯೂಬ್ ಚಾನಲ್‌ ಗಳು ಕನ್ನಡದಲ್ಲಿವೆ. ಅವುಗಳ ಪೈಕಿ ನಿಮಗಿಷ್ಟವಾದವು ಯಾವುವು? ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!

Related Stories

No stories found.
logo
ಇಜ್ಞಾನ Ejnana
www.ejnana.com