ಇ-ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಓದುವುದು ಈಚೆಗೆ ಸಾಮಾನ್ಯವಾಗುತ್ತಿರುವ ಅಭ್ಯಾಸ
ಇ-ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಓದುವುದು ಈಚೆಗೆ ಸಾಮಾನ್ಯವಾಗುತ್ತಿರುವ ಅಭ್ಯಾಸImage by kalhh from Pixabay

ಕನ್ನಡದ ಇಜ್ಞಾನ: ಇ-ಪುಸ್ತಕದ ಈ ತಾಣಗಳು

ಬೇರೆ ಭಾಷೆಗಳಲ್ಲಿರುವಷ್ಟು ಪ್ರಮಾಣದ ಇ-ಪುಸ್ತಕಗಳು ಕನ್ನಡದಲ್ಲಿ ಸಿಗುತ್ತಿಲ್ಲ ಎನ್ನುವ ಆರೋಪವನ್ನು ದೂರಮಾಡುವ ನಿಟ್ಟಿನಲ್ಲಿ ಇದೀಗ ಕೆಲಸ ನಡೆದಿದೆ. ಅಂತಹ ಮೂರು ಪ್ರಯತ್ನಗಳ ಪರಿಚಯ ಇಲ್ಲಿದೆ.

ವಿದ್ಯುನ್ಮಾನ ರೂಪದಲ್ಲಿ ದೊರಕುವ ಪುಸ್ತಕಗಳನ್ನು 'ಇ-ಪುಸ್ತಕ'ಗಳೆಂದು ಗುರುತಿಸುವುದು ನಮಗೆ ಗೊತ್ತು. ಇವನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಓದುವುದು ಈಚೆಗೆ ಸಾಮಾನ್ಯವಾಗುತ್ತಿರುವ ಅಭ್ಯಾಸ. ಬೇರೆ ಭಾಷೆಗಳಲ್ಲಿರುವಷ್ಟು ಪ್ರಮಾಣದ ಇ-ಪುಸ್ತಕಗಳು ಕನ್ನಡದಲ್ಲಿ ಸಿಗುತ್ತಿಲ್ಲ ಎನ್ನುವ ಆರೋಪವನ್ನು ದೂರಮಾಡುವ ನಿಟ್ಟಿನಲ್ಲೂ ಒಂದಷ್ಟು ಕೆಲಸ ನಡೆದಿದೆ.

ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ 'ಇ-ಪುಸ್ತಕ' ಜಾಲತಾಣ ಇಂತಹ ಪ್ರಯತ್ನಗಳಿಗೊಂದು ಉದಾಹರಣೆ. ಈ ಜಾಲತಾಣದಲ್ಲಿ ಈವರೆಗೆ ಸುಮಾರು ೯೦೦ಕ್ಕೂ ಹೆಚ್ಚಿನ ಇ-ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಓದುಗರು ಅವೆಲ್ಲವನ್ನೂ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಓದಬಹುದು.

'ಇ-ಪುಸ್ತಕ' ಜಾಲತಾಣಕ್ಕೆ ಭೇಟಿಕೊಡಲು ಇಲ್ಲಿ ಕ್ಲಿಕ್ ಮಾಡಿ: kanaja.in/ebook

ಕೃಷ್ಣಶಾಸ್ತ್ರಿಗಳನ್ನು ಪರಿಚಯಿಸುವ ಒಂದು ಕಿರುಚಿತ್ರವೂ ಇಲ್ಲಿದೆ.
ಕೃಷ್ಣಶಾಸ್ತ್ರಿಗಳನ್ನು ಪರಿಚಯಿಸುವ ಒಂದು ಕಿರುಚಿತ್ರವೂ ಇಲ್ಲಿದೆ.ark.sirinudi.org

ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ, ಪ್ರಬುದ್ಧ ಕರ್ನಾಟಕ ಪತ್ರಿಕೆ, ಮೈಸೂರು ವಿವಿ-ಕಸಾಪ ನಿಘಂಟುಗಳು ಸೇರಿದಂತೆ ಕನ್ನಡದ ಹಲವು ಗಣನೀಯ ಸಾಧನೆಗಳ ಹಿಂದೆ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳ ಶ್ರಮವನ್ನು ನಾವು ಗುರುತಿಸಬಹುದು. ತಮ್ಮ ಸಾಹಿತ್ಯಕೃಷಿಯಿಂದ ಹೊಸಗನ್ನಡದ ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸಿದ ಕೃಷ್ಣಶಾಸ್ತ್ರಿಗಳನ್ನು ಕುರಿತ ವಿಶಿಷ್ಟ ಜಾಲತಾಣವೊಂದು ಇದೀಗ ರೂಪುಗೊಂಡಿದೆ. ಅವರು ರಚಿಸಿದ ವಚನ ಭಾರತ, ನಿರ್ಮಲ ಭಾರತೀ, ಕಥಾಮೃತ, ಸಂಸ್ಕೃತ ನಾಟಕ ಮುಂತಾದ ಹಲವಾರು ಕೃತಿಗಳನ್ನು ಇಲ್ಲಿ ಉಚಿತವಾಗಿ ಓದಬಹುದು, ನಮ್ಮ ಮೊಬೈಲಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಅವರ ಜೀವನ-ಸಾಧನೆಗಳ ಕುರಿತು ಮಾಹಿತಿಯನ್ನೂ ಪಡೆದುಕೊಳ್ಳಬಹುದು.

ಈ ಜಾಲತಾಣದ ಕೊಂಡಿ ಇಲ್ಲಿದೆ: ark.sirinudi.org

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕನ್ನಡ ಪುಸ್ತಕಗಳ ಪ್ರಕಟಣೆ ಶುರುವಾದ ನಂತರ ಕನ್ನಡದ ಓದುಗರಿಗೆ ದೊರಕುತ್ತಿರುವ ಇ-ಪುಸ್ತಕಗಳ ಸಂಖ್ಯೆ ನಿಧಾನಕ್ಕೆ ಹೆಚ್ಚುತ್ತಿದೆ. ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯರಲ್ಲೊಬ್ಬರಾದ ಡಿ. ವಿ. ಗುಂಡಪ್ಪನವರ ಅನೇಕ ಕೃತಿಗಳು ಇದೀಗ ಇ-ಪುಸ್ತಕ ರೂಪದಲ್ಲಿ ದೊರಕುವಂತಾಗಿರುವುದು ಈ ನಿಟ್ಟಿನಲ್ಲೊಂದು ಮಹತ್ವದ ಹೆಜ್ಜೆ. ಶ್ರೀರಂಗಪಟ್ಟಣದ ಶ್ರೀರಂಗ ಡಿಜಿಟಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಸಂಸ್ಥೆ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ ಈ ಪುಸ್ತಕಗಳನ್ನು ನಾವು ಗೂಗಲ್ ಪ್ಲೇ ಸ್ಟೋರಿನಲ್ಲಿ ಕೊಂಡು ಓದಬಹುದು.

ಪುಸ್ತಕಗಳನ್ನು ಕೊಳ್ಳಲು ಈ ತಾಣಕ್ಕೆ ಭೇಟಿಕೊಡಿ: sriranga.digital/dvg

ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!
ಇಲ್ಲಿ ಹೇಳಿರುವ ತಾಣಗಳಷ್ಟೇ ಅಲ್ಲದೆ ಕನ್ನಡದ ವಿದ್ಯುನ್ಮಾನ ಪುಸ್ತಕಗಳು ಇನ್ನೂ ಹಲವು ಕಡೆ ದೊರಕುತ್ತಿವೆ. ಅಂತಹ ತಾಣಗಳ ಪೈಕಿ ನಿಮಗಿಷ್ಟವಾದವು ಯಾವುವು? ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ! [ಲೇಖಕ-ಪ್ರಕಾಶಕರ ಅನುಮತಿಯಿಲ್ಲದೆ ಪುಸ್ತಕಗಳನ್ನು ಪ್ರಕಟಿಸಿರುವ ತಾಣಗಳ ಮಾಹಿತಿಯನ್ನು ದಯಮಾಡಿ ಹಾಕಬೇಡಿ, ಕೃತಿಸ್ವಾಮ್ಯವನ್ನು ಗೌರವಿಸಿ]

Related Stories

No stories found.
logo
ಇಜ್ಞಾನ Ejnana
www.ejnana.com