ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಹಲವು ನಿಘಂಟುಗಳಿವೆ.
ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಹಲವು ನಿಘಂಟುಗಳಿವೆ.School photo created by jcomp - www.freepik.com

ಕನ್ನಡದ ಇಜ್ಞಾನ: ನಿಘಂಟುಗಳ ಆನ್‌ಲೈನ್ ಲೋಕ

ಹೆಚ್ಚಿನ ಸಂಖ್ಯೆಯ ನಿಘಂಟುಗಳನ್ನು ಸಂಗ್ರಹಿಸುವುದು, ಬೇಕೆಂದ ಕಡೆಗೆ ಕೊಂಡೊಯ್ಯುವುದು ಕಷ್ಟ. ಹಾಗೆಂದ ಮಾತ್ರಕ್ಕೆ ಪದಗಳ ಅರ್ಥದ ಹುಡುಕಾಟ ಕಠಿಣವಲ್ಲ!

ಅದೆಷ್ಟೋ ಬಗೆಯ ಮಾಹಿತಿಯ ಆಗರವಾದ ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಹಲವು ನಿಘಂಟುಗಳೂ ಸಿಗುತ್ತವೆ. ಮುದ್ರಿತ ನಿಘಂಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸುವುದು, ಬೇಕೆಂದ ಕಡೆಗೆ ಕೊಂಡೊಯ್ಯುವುದು ಕಷ್ಟವೇ ಇರಬಹುದು; ಆದರೆ ಡಿಜಿಟಲ್ ಜಗತ್ತಿನಲ್ಲಿ ಪದಗಳ ಅರ್ಥದ ಹುಡುಕಾಟ ಕಠಿಣವಾಗಬೇಕಿಲ್ಲ ಎಂದು ಇವು ನಮಗೆ ತೋರಿಸುತ್ತವೆ. ಕನ್ನಡದ ನಿಘಂಟುಗಳನ್ನು ನಮಗೆ ನೀಡುತ್ತಿರುವ ಮೂರು ತಾಣಗಳ ಪರಿಚಯ ಇಲ್ಲಿದೆ.

ಭಾರತದ ಎಲ್ಲಾ ಭಾಷೆಗಳಲ್ಲಿರುವ ಜ್ಞಾನವನ್ನು ಒಂದೇ ಜಾಲತಾಣದ ಮೂಲಕ ಒದಗಿಸುವ ಭಾರತವಾಣಿ.
ಭಾರತದ ಎಲ್ಲಾ ಭಾಷೆಗಳಲ್ಲಿರುವ ಜ್ಞಾನವನ್ನು ಒಂದೇ ಜಾಲತಾಣದ ಮೂಲಕ ಒದಗಿಸುವ ಭಾರತವಾಣಿ.bharatavani.in

ಭಾರತದ ಎಲ್ಲಾ ಭಾಷೆಗಳಲ್ಲಿರುವ ಜ್ಞಾನವನ್ನು ಒಂದೇ ಜಾಲತಾಣದ ಮೂಲಕ ಒದಗಿಸುವ ಭಾರತ ಸರಕಾರದ ಯೋಜನೆಯೇ 'ಭಾರತವಾಣಿ'. ಅಂತರಜಾಲದಲ್ಲಿ ಹುಡುಕುವಾಗ ಇಂಗ್ಲಿಷ್ ನಿಘಂಟುಗಳು ಸಿಗುವಷ್ಟೇ ಸುಲಭವಾಗಿ ಭಾರತೀಯ ಭಾಷೆಗಳ ನಿಘಂಟುಗಳೂ ದೊರಕುವಂತೆ ಮಾಡುವ ಪ್ರಯತ್ನದಲ್ಲಿ ಈ ಜಾಲತಾಣ ತೊಡಗಿಕೊಂಡಿದೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ, ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿರುವ ನೂರಾರು ನಿಘಂಟುಗಳನ್ನು ಈ ತಾಣದಲ್ಲಿ ಬಳಸಬಹುದು, ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು. ಭಾರತವಾಣಿಯ ಮೊಬೈಲ್ ಆಪ್ ಕೂಡ ಇದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರ ಮೂಡಿಸಲು ವ್ಯಾಪಕವಾಗಿ ಬಳಕೆಯಾಗುವ 'ಬರಹ' ತಂತ್ರಾಂಶದ ಜಾಲತಾಣದಲ್ಲಿ 'ಬರಹ ಅಂತರಜಾಲ ನಿಘಂಟು' ನಮಗೆ ದೊರಕುತ್ತದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು, ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು ಸೇರಿದಂತೆ ಹಲವು ನಿಘಂಟುಗಳನ್ನು ನಾವು ಈ ತಾಣದಲ್ಲಿ ಬಳಸಬಹುದು. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪದಗಳನ್ನು ಟೈಪ್ ಮಾಡಿ ಅವುಗಳ ಅರ್ಥವನ್ನು ನಾವಿಲ್ಲಿ ಹುಡುಕಬಹುದು.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕೆಲಸಮಾಡುತ್ತಿರುವ 'ಕಣಜ ಅಂತರಜಾಲ ಕನ್ನಡ ಜ್ಞಾನಕೋಶ'ದಲ್ಲೂ ಕನ್ನಡದ ಹಲವು ನಿಘಂಟುಗಳು ನಮಗೆ ದೊರಕುತ್ತವೆ. ಕಣಜ ಜಾಲತಾಣದ ಶಬ್ದಕೋಶ ಪುಟದ ಮೂಲಕ ೪೦ ಸಾವಿರಕ್ಕೂ ಹೆಚ್ಚು ಪದಗಳ ವಿವರಣೆಯನ್ನು ಪಡೆದುಕೊಳ್ಳುವುದು ಸಾಧ್ಯ. ಪ್ರೊ. ಜೀವಿಯವರು ರಚಿಸಿರುವ ಪ್ರಿಸಂ ನಿಘಂಟುಗಳ ಜೊತೆಗೆ ವಿವರಣಾತ್ಮಕ ಪರಿಸರ ಅರ್ಥಕೋಶ, ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ, ಕೃಷಿ ಪದಕೋಶ, ಆಡಳಿತ ಪದಕೋಶಗಳನ್ನೂ ನಾವಿಲ್ಲಿ ಬಳಸಬಹುದು.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!
ಇಲ್ಲಿ ಹೇಳಿರುವ ಉದಾಹರಣೆಗಳ ಜೊತೆಗೆ ಕನ್ನಡ ನಿಘಂಟುಗಳನ್ನು ಒದಗಿಸುವ ಇನ್ನೂ ಕೆಲ ಜಾಲತಾಣಗಳು ಕನ್ನಡದಲ್ಲಿವೆ. ಅವುಗಳ ಪೈಕಿ ನಿಮಗಿಷ್ಟವಾದವು ಯಾವುವು? ಕಮೆಂಟ್ ಮಾಡಿ, ಮಾಹಿತಿ ಹಂಚಿಕೊಳ್ಳಿ!

Related Stories

No stories found.
logo
ಇಜ್ಞಾನ Ejnana
www.ejnana.com