ಮೊಬೈಲ್ ಜಗದ ಅಸಂಖ್ಯ ಆಪ್‌ಗಳ ಪೈಕಿ ಆಯ್ದ ಕೆಲವು, ನಿಮಗಾಗಿ ಈ ಅಂಕಣದಲ್ಲಿ!
ಮೊಬೈಲ್ ಜಗದ ಅಸಂಖ್ಯ ಆಪ್‌ಗಳ ಪೈಕಿ ಆಯ್ದ ಕೆಲವು, ನಿಮಗಾಗಿ ಈ ಅಂಕಣದಲ್ಲಿ!

ಆಪ್ ಇಜ್ಞಾನ: ಮೆಸ್ ಇಲ್ಲದ ಎಸ್ಸೆಮ್ಮೆಸ್

ಎಸ್ಸೆಮ್ಮೆಸ್‌ಗಳನ್ನು ಸುಲಭವಾಗಿ ನಿರ್ವಹಿಸಲು ಈ ಆಪ್ ನೆರವು ಪಡೆದುಕೊಳ್ಳಿ!

ಆಪ್ತರೊಡನೆ ಸಂವಹನಕ್ಕಾಗಿ ಎಸ್ಸೆಮ್ಮೆಸ್ ಬಳಕೆಯನ್ನು ನಾವೆಲ್ಲ ಕಡಿಮೆಮಾಡಿದ್ದೇವೆ, ನಿಜ. ಆದರೆ ಬ್ಯಾಂಕು, ಆನ್‌ಲೈನ್ ಅಂಗಡಿ, ಮೊಬೈಲ್ ಸೇವೆಗಳೆಲ್ಲ ನಮಗೆ ಈಗಲೂ ಸಾಕಷ್ಟು ಎಸ್ಸೆಮ್ಮೆಸ್‌ಗಳನ್ನು ಕಳಿಸುತ್ತವೆ. ಬಹಳಷ್ಟು ವಹಿವಾಟುಗಳಿಗೆ ಬೇಕಾದ ಓಟಿಪಿ ಬರುವುದೂ ಎಸ್ಸೆಮ್ಮೆಸ್ ಮೂಲಕವೇ. ಇಷ್ಟೆಲ್ಲ ಎಸ್ಸೆಮ್ಮೆಸ್‌ಗಳನ್ನು ಸುಲಭವಾಗಿ ನಿರ್ವಹಿಸಲು ನೆರವಾಗುವುದು ಆಂಡ್ರಾಯ್ಡ್ ಫೋನುಗಳಿಗೆ ಮೈಕ್ರೋಸಾಫ್ಟ್ ಸಂಸ್ಥೆ ರೂಪಿಸಿರುವ 'ಎಸ್ಸೆಮ್ಮೆಸ್ ಆರ್ಗನೈಸರ್' ಎಂಬ ಆಪ್‌‌ನ ವೈಶಿಷ್ಟ್ಯ. ಬರುವ ಸಂದೇಶಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಪ್ರದರ್ಶಿಸುವ ಈ ಆಪ್ ಅವನ್ನು ವಹಿವಾಟಿಗೆ ಸಂಬಂಧಿಸಿದವು, ಜಾಹೀರಾತುಗಳು ಎಂದೆಲ್ಲ ವಿಂಗಡಿಸಿಕೊಡುತ್ತದೆ. ಓಟಿಪಿ ಸಂದೇಶಗಳಿಂದ ಸಂಖ್ಯೆಯನ್ನಷ್ಟೇ ತೆಗೆದು ಪ್ರತ್ಯೇಕವಾಗಿ ಪ್ರದರ್ಶಿಸುವ, ಬಿಲ್ಲುಗಳನ್ನು ಸಕಾಲಕ್ಕೆ ಪಾವತಿಸಲು ನೆನಪಿಸುವ ಸೌಲಭ್ಯಗಳೂ ಇದರಲ್ಲಿವೆ.

ಗೂಗಲ್ ಪ್ಲೇಸ್ಟೋರ್ ಕೊಂಡಿ: tinyurl.com/SMSOrganizer

Related Stories

No stories found.
ಇಜ್ಞಾನ Ejnana
www.ejnana.com