ಆಪ್ ಇಜ್ಞಾನ: ಮೊಬೈಲಿನಲ್ಲೂ ಕೈಬರಹ
ಮೊಬೈಲ್ ಜಗದ ಅಸಂಖ್ಯ ಆಪ್‌ಗಳ ಪೈಕಿ ಆಯ್ದ ಕೆಲವು, ನಿಮಗಾಗಿ ಈ ಅಂಕಣದಲ್ಲಿ!

ಆಪ್ ಇಜ್ಞಾನ: ಮೊಬೈಲಿನಲ್ಲೂ ಕೈಬರಹ

ನಮ್ಮ ಹಸ್ತಾಕ್ಷರವನ್ನೂ ಮೊಬೈಲ್ ಫೋನಿಗೆ ಅರ್ಥಮಾಡಿಸುವುದು ಸಾಧ್ಯ!

ಸಂದೇಶ ಕಳಿಸಲು ಮೊಬೈಲ್ ಫೋನಿಗೆ ಮಾಹಿತಿಯನ್ನು ಊಡಿಸಬೇಕೆಂದರೆ ಪಠ್ಯವನ್ನು ಟೈಪ್ ಮಾಡುವುದೊಂದೇ ಮಾರ್ಗವಲ್ಲ. ನಮ್ಮ ಹಸ್ತಾಕ್ಷರವನ್ನೂ ಅವುಗಳಿಗೆ ಅರ್ಥಮಾಡಿಸುವುದು ಸಾಧ್ಯ. ಈ ಕೆಲಸಕ್ಕೆ ಬಳಕೆಯಾಗುವುದು 'ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್', ಅರ್ಥಾತ್ ಕೈಬರಹವನ್ನು ಗುರುತಿಸುವ ತಂತ್ರಜ್ಞಾನ. ಸ್ಮಾರ್ಟ್‌ಫೋನಿನ ಟಚ್‌ಸ್ಕ್ರೀನ್ ಪರದೆಯನ್ನೇ ಸ್ಲೇಟಿನಂತೆ ಬಳಸಿ ಬೆರಳಿನಿಂದ ನಮ್ಮ ಸಂದೇಶ ಬರೆದರೆ, ಆ ಅಕ್ಷರಗಳನ್ನೆಲ್ಲ ಗ್ರಹಿಸಿ ಡಿಜಿಟಲ್ ರೂಪಕ್ಕೆ ತರಲು ಈ ತಂತ್ರಜ್ಞಾನ ನೆರವಾಗುತ್ತದೆ. ಆಂಡ್ರಾಯ್ಡ್ ಫೋನುಗಳಲ್ಲಿ ಇದನ್ನು ಸಾಧ್ಯವಾಗಿಸಲು ಬಳಸಬಹುದಾದ ಆಪ್ ಹೆಸರೇ 'ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್'. ಇದು ಕನ್ನಡದ ಅಕ್ಷರಗಳನ್ನೂ ಗುರುತಿಸುತ್ತದೆ.

ಗೂಗಲ್ ಪ್ಲೇಸ್ಟೋರ್ ಕೊಂಡಿ: tinyurl.com/kaibaraha

Related Stories

No stories found.
ಇಜ್ಞಾನ Ejnana
www.ejnana.com