ವ್ಯಕ್ತಿಯೊಬ್ಬ ಆರೋಗ್ಯವಾಗಿದ್ದಾನೆ ಎಂದರೆ ಆತನ ಇಮ್ಯೂನಿಟಿ ಚೆನ್ನಾಗಿದೆಯೆಂದು ಅರ್ಥ. ಪ್ರತಿರಕ್ಷಣ ವ್ಯವಸ್ಥೆ ಸದೃಢವಾಗಿದ್ದ ಸಂದರ್ಭದಲ್ಲಿ ಅದೇ ಆತನ ಇಮ್ಯೂನಿಟಿ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ.
ವ್ಯಕ್ತಿಯೊಬ್ಬ ಆರೋಗ್ಯವಾಗಿದ್ದಾನೆ ಎಂದರೆ ಆತನ ಇಮ್ಯೂನಿಟಿ ಚೆನ್ನಾಗಿದೆಯೆಂದು ಅರ್ಥ. ಪ್ರತಿರಕ್ಷಣ ವ್ಯವಸ್ಥೆ ಸದೃಢವಾಗಿದ್ದ ಸಂದರ್ಭದಲ್ಲಿ ಅದೇ ಆತನ ಇಮ್ಯೂನಿಟಿ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ.

ಇಮ್ಯುನೋಕಾಂಪ್ರಮೈಸ್ಡ್ ಅಂದರೇನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ರೋಗಕಾರಕಗಳನ್ನು ವಿರೋಧಿಸಲು, ಅವುಗಳಿಂದ ಸೋಂಕು ತಟ್ಟದಿರುವಂತೆ ತಡೆಯಲು ಪ್ರಕೃತಿಯು ನಮ್ಮ ದೇಹದಲ್ಲಿ ಪ್ರತಿರಕ್ಷಣ ವ್ಯವಸ್ಥೆಯನ್ನು ರೂಪಿಸಿದೆ. ಇಮ್ಯೂನ್ ಸಿಸ್ಟಂ ಎಂದು ಕರೆಯುವುದು ಇದನ್ನೇ. ರೋಗಕಾರಕದ ಸೋಂಕಿಗೆ ಒಳಗಾಗದ ಸ್ಥಿತಿಯನ್ನು ಇಮ್ಯೂನಿಟಿ (ರೋಗರಕ್ಷೆ) ಎಂದು ಕರೆಯುತ್ತಾರೆ.

ವ್ಯಕ್ತಿಯೊಬ್ಬ ಆರೋಗ್ಯವಾಗಿದ್ದಾನೆ ಎಂದರೆ ಆತನ ಇಮ್ಯೂನಿಟಿ ಚೆನ್ನಾಗಿದೆಯೆಂದು ಅರ್ಥ. ಪ್ರತಿರಕ್ಷಣ ವ್ಯವಸ್ಥೆ ಸದೃಢವಾಗಿದ್ದ ಸಂದರ್ಭದಲ್ಲಿ ಅದೇ ಆತನ ಇಮ್ಯೂನಿಟಿ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಇದು ಆಕ್ಟಿವ್ ಇಮ್ಯೂನಿಟಿ (ಸಕ್ರಿಯ ರೋಗರಕ್ಷೆ).

ಹಾಗಿಲ್ಲದೆ ವ್ಯಕ್ತಿಯ ರೋಗರಕ್ಷೆ ದುರ್ಬಲವಾಗಿದ್ದಾಗ ಆತನಲ್ಲಿ ಸೋಂಕುಗಳನ್ನು ವಿರೋಧಿಸುವ ಶಕ್ತಿಯೂ ಕಡಿಮೆಯಾಗುತ್ತದೆ. ಇಮ್ಯೂನಿಟಿ (ರೋಗರಕ್ಷೆ) ಕಾಂಪ್ರಮೈಸ್ ಆಗಿರುವ (ಕುಂದಿರುವ) ಇಂತಹ ವ್ಯಕ್ತಿಗಳನ್ನು 'ಇಮ್ಯುನೋಕಾಂಪ್ರಮೈಸ್ಡ್' ಎಂದು ಗುರುತಿಸಲಾಗುತ್ತದೆ.

ಈ ಹಿಂದಿನ ಅಸ್ವಸ್ಥತೆಯಿಂದಾಗಿ ಅಥವಾ ಅದಕ್ಕಾಗಿ ತೆಗೆದುಕೊಂಡ-ತೆಗೆದುಕೊಳ್ಳುತ್ತಿರುವ ಔಷಧೋಪಚಾರದಿಂದಾಗಿ ಈ ಪರಿಸ್ಥಿತಿ ಉಂಟಾಗುವುದು ಸಾಧ್ಯ. ಪ್ರತಿರಕ್ಷಣ ವ್ಯವಸ್ಥೆ ಪೂರ್ಣವಾಗಿ ಬೆಳೆದಿಲ್ಲದ ಮಕ್ಕಳಲ್ಲಿ ಅಥವಾ ವಯಸ್ಸಿನ ಕಾರಣದಿಂದ ಅದು ಸಹಜವಾಗಿ ಕುಂದಿರುವ ಹಿರಿಯರಲ್ಲೂ ರೋಗರಕ್ಷೆ ದುರ್ಬಲವಾಗಿರುತ್ತದೆ.

ದೇಹದ ರಕ್ಷಣಾವ್ಯವಸ್ಥೆ ದುರ್ಬಲವಾಗಿರುವ ಈ ಪರಿಸ್ಥಿತಿಯಲ್ಲಿ ಕೋವಿಡ್-೧೯ ಸೇರಿದಂತೆ ಯಾವುದೇ ಸೋಂಕು ಇಂತಹ ವ್ಯಕ್ತಿಗಳನ್ನು ಸುಲಭವಾಗಿ ಬಾಧಿಸಬಹುದು. ರೋಗರಕ್ಷೆ ಯಾವ ಮಟ್ಟಕ್ಕೆ ಕುಂದಿದೆ ಎನ್ನುವುದನ್ನು ಅವಲಂಬಿಸಿ ಸೋಂಕಿನ ತೀವ್ರತೆಯಲ್ಲಿ ವ್ಯತ್ಯಾಸವಾಗುವುದು ಸಾಧ್ಯ. ಇಂತಹ ವ್ಯಕ್ತಿಗಳಲ್ಲಿ ಲಸಿಕೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡಲಾರದು.

ಹೀಗಾಗಿ ಇಮ್ಯುನೋಕಾಂಪ್ರಮೈಸ್ಡ್ ವ್ಯಕ್ತಿಗಳಲ್ಲಿ ರೋಗರಕ್ಷೆಯನ್ನು ವೃದ್ಧಿಸಲು ವೈದ್ಯರು ವಿಶೇಷ ಕ್ರಮಗಳನ್ನು ಅನುಸರಿಸುತ್ತಾರೆ. ಇತರರ ದೇಹದಲ್ಲಿ ರೂಪುಗೊಂಡ ಪ್ರತಿಕಾಯಗಳನ್ನು (ಆಂಟಿಬಾಡಿ) ರೋಗಿಯ ದೇಹಕ್ಕೆ ಸೇರಿಸುವುದು ಇಂತಹ ಕ್ರಮಗಳಲ್ಲೊಂದು. ಹೀಗೆ ಸೃಷ್ಟಿಯಾಗುವುದೇ ಪ್ಯಾಸಿವ್ ಇಮ್ಯೂನಿಟಿ (ನಿಷ್ಕ್ರಿಯ ರೋಗರಕ್ಷೆ). ಸದ್ಯ ಸುದ್ದಿಯಲ್ಲಿರುವ ಪ್ಲಾಸ್ಮಾ ಥೆರಪಿ ಇದಕ್ಕೊಂದು ಉದಾಹರಣೆ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com