ರೋಗಪೀಡಿತರನ್ನು ಬೇಗ ಪತ್ತೆಮಾಡಬೇಕಿದ್ದರೆ ಅತ್ಯಂತ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಜನರನ್ನು ಪರೀಕ್ಷಿಸಬೇಕು!
ರೋಗಪೀಡಿತರನ್ನು ಬೇಗ ಪತ್ತೆಮಾಡಬೇಕಿದ್ದರೆ ಅತ್ಯಂತ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಜನರನ್ನು ಪರೀಕ್ಷಿಸಬೇಕು!

ಟೆಸ್ಟಿಂಗ್ ಕಿಟ್ ಅಂದರೆ ಏನು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಕೋವಿಡ್-೧೯ ಯಾರಿಗಾದರೂ ತಗುಲಿದೆಯೆಂದರೆ ಅದನ್ನು ತಕ್ಷಣವೇ ಪತ್ತೆಮಾಡುವುದು ಅನಿವಾರ್ಯ. ಏಕೆಂದರೆ ರೋಗ ದೃಢಪಟ್ಟ ನಂತರವಷ್ಟೇ ವೈದ್ಯರು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಲ್ಲರು. ನಿಯಂತ್ರಣ ಕ್ರಮಗಳನ್ನು ಕೈಗೊಂಡು ರೋಗ ಇನ್ನಷ್ಟು ಹರಡದಂತೆ ತಡೆಯುವುದು ಕೂಡ ರೋಗಪತ್ತೆಯ ಕೆಲಸ ಕ್ಷಿಪ್ರವಾಗಿ ನಡೆದಾಗ ಮಾತ್ರ ಸಾಧ್ಯವಾಗುತ್ತದೆ. ಇಂತಹ ಪರೀಕ್ಷೆಗಳು ಎಷ್ಟು ಮುಖ್ಯವೆಂದರೆ "ಪರೀಕ್ಷಿಸಿ, ಪರೀಕ್ಷಿಸಿ, ಪರೀಕ್ಷಿಸಿ ಎನ್ನುವುದೇ ಎಲ್ಲ ದೇಶಗಳಿಗೂ ನಾವು ನೀಡುತ್ತಿರುವ ಸಂದೇಶ" ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ.

ರೋಗಿಗಳು ಯಾವ ರೋಗದಿಂದ ಬಾಧಿತರಾಗಿದ್ದಾರೆ ಎಂದು ತಿಳಿಯಲು ಹಲವು ವಿಧಾನಗಳಿವೆ. ಕೋವಿಡ್-೧೯ ಸಂದರ್ಭದಲ್ಲಿ ರೋಗಿಗಳ ಗಂಟಲ ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸುತ್ತಿರುವುದು ಇಂತಹ ವಿಧಾನಗಳಲ್ಲೊಂದು. ಇದೇ ಉದ್ದೇಶಕ್ಕಾಗಿ ರಕ್ತಸಾರದ (ಸೀರಮ್) ಪರೀಕ್ಷೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ.

ರೋಗಪೀಡಿತರನ್ನು ಬೇಗ ಪತ್ತೆಮಾಡಬೇಕಿದ್ದರೆ ಅತ್ಯಂತ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಜನರನ್ನು ಪರೀಕ್ಷಿಸಬೇಕು. ಪರೀಕ್ಷೆಗೆ ಬೇಕಾದ ಸೌಲಭ್ಯಗಳು ಕೆಲವೇ ದೊಡ್ಡ ಪ್ರಯೋಗಾಲಯಗಳಲ್ಲಿ ಮಾತ್ರ ಇದ್ದರೆ ಪರೀಕ್ಷೆಗಳನ್ನು ಬೇಗ ಮುಗಿಸುವುದು ಕಷ್ಟ. ಅವು ಎಲ್ಲೆಡೆಯೂ ನಡೆದಾಗ ಮಾತ್ರ ಹೆಚ್ಚಿನ ಜನರನ್ನು ಪರೀಕ್ಷಿಸಬಹುದು. ಇದನ್ನು ಸಾಧ್ಯವಾಗಿಸುವುದು ಟೆಸ್ಟಿಂಗ್ ಕಿಟ್‌ಗಳ ಹೆಚ್ಚುಗಾರಿಕೆ.

ಅಗತ್ಯ ಸವಲತ್ತುಗಳನ್ನೆಲ್ಲ ಇವು ಒಟ್ಟಿಗೆ ಒದಗಿಸುವುದರಿಂದ ಎಲ್ಲ ಪ್ರಯೋಗಾಲಯ, ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳ ಜೊತೆಗೆ ಹೊರಾಂಗಣದಲ್ಲೂ ರೋಗಪತ್ತೆ ಪರೀಕ್ಷೆ ನಡೆಸುವುದು - ಫಲಿತಾಂಶಗಳನ್ನು ಬೇಗನೆ ಪಡೆಯುವುದು ಸಾಧ್ಯವಾಗುತ್ತದೆ. ರೋಗಿಗಳಿಂದ ಸಂಗ್ರಹಿಸಿದ ಮಾದರಿಯನ್ನು ದೂರದ ಪ್ರಯೋಗಾಲಯಗಳಿಗೆ ಕಳಿಸಬೇಕಿಲ್ಲವಾದ್ದರಿಂದ ಸಮಯ ಉಳಿಯುತ್ತದೆ, ಒಟ್ಟಾರೆ ವೆಚ್ಚವೂ ಕಡಿಮೆಯಾಗುತ್ತದೆ. ಕೋವಿಡ್-೧೯ ಪತ್ತೆಗೆ ನೆರವಾಗುವ ಇಂತಹ ಕಿಟ್‌ಗಳನ್ನು ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಅಭಿವೃದ್ಧಿಪಡಿಸಲಾಗುತ್ತಿದೆ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com