COVID-19 ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್, ಅಂದರೆ ಮುಖಗವುಸುಗಳ ಬಳಕೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ
COVID-19 ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್, ಅಂದರೆ ಮುಖಗವುಸುಗಳ ಬಳಕೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ Image by Tumisu from Pixabay
ವೈವಿಧ್ಯ

ಟ್ವೀಟ್ ಅಲರ್ಟ್: ಮನೆಯಲ್ಲೇ ಮಾಸ್ಕ್ ತಯಾರಿಸಿ!

ಇಜ್ಞಾನ ತಂಡ

COVID-19 ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್, ಅಂದರೆ ಮುಖಗವುಸುಗಳ ಬಳಕೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅಲ್ಲದೆ ಅವುಗಳನ್ನು ಕೊಳ್ಳುವುದು ಹೇಗೆ, ಆ ಕೆಲಸಕ್ಕೆ ಹೊರಹೋಗುವುದು ಹೇಗೆ ಎನ್ನುವ ಪ್ರಶ್ನೆಗಳೂ ಇವೆ.

ಈ ಗೊಂದಲವನ್ನು ಪರಿಹರಿಸಿ, ಮಾಸ್ಕ್ ಕೊಳ್ಳುವ ಬಗೆಗೆ ಇರುವ ಪ್ರಶ್ನೆಗಳಿಗೆ ಮನೆಯಲ್ಲೇ ಉತ್ತರ ಕಂಡುಕೊಳ್ಳಲು ನೆರವಾಗುವ ಕೈಪಿಡಿಯೊಂದನ್ನು ಕೇಂದ್ರ ಸರಕಾರ ಇದೀಗ ಪ್ರಕಟಿಸಿದೆ. ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಪ್ರಕಟವಾಗಿರುವ ಈ ಕೈಪಿಡಿಯ ಕನ್ನಡ ಆವೃತ್ತಿಯೂ ಲಭ್ಯವಿರುವುದು ವಿಶೇಷ.

ಈ ಕೈಪಿಡಿಯ ಬಗೆಗಿನ ಮಾಹಿತಿಯನ್ನು ಈ ಕೆಳಗಿನ ಟ್ವೀಟ್‌ನಲ್ಲಿ ನೀಡಲಾಗಿದೆ. ಇದನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡಕ್ಕೆ ತಂದ ಶ್ರೀ ಕೊಳ್ಳೇಗಾಲ ಶರ್ಮ ಮತ್ತು ಅವರ ತಂಡವನ್ನು ಇಜ್ಞಾನ ಬಳಗ ಅಭಿನಂದಿಸುತ್ತದೆ.