ವೈವಿಧ್ಯ

ವೀಡಿಯೋ ಇಜ್ಞಾನ: ಕೀನ್ಯಾ ದೇಶದ ಹಕ್ಕಿಗಳು

ಇಜ್ಞಾನ ತಂಡ

ಆಫ್ರಿಕಾ ಖಂಡ ಎಂದಕೂಡಲೇ ನಮ್ಮ ಮನಸ್ಸಿಗೆ ಬರುವ ಸಂಗತಿಗಳಲ್ಲಿ ಅಲ್ಲಿನ ವನ್ಯಜೀವನ ಪ್ರಮುಖವಾದದ್ದು. ಅದರಲ್ಲೂ ಜೀಬ್ರಾ, ಜಿರಾಫೆ, ಘೇಂಡಾಮೃಗ, ನೀರುಕುದುರೆ (ಹಿಪ್ಪೋ) ಮುಂತಾದ ಪ್ರಾಣಿಗಳಿಗೆ ವಿಶೇಷ ಸ್ಥಾನ.

ಪ್ರಾಯಶಃ ಆಸ್ಟ್ರಿಚ್ ಒಂದರ ಹೊರತು ನಮಗೆ ಅಷ್ಟಾಗಿ ಪರಿಚಯವಿಲ್ಲದಿದ್ದರೂ ಆಫ್ರಿಕಾದ ಪಕ್ಷಿಸಂಕುಲ ಕೂಡ ಬಹಳ ವೈವಿಧ್ಯಮಯ.

ರಣಹದ್ದುಗಳು, ಕೊಕ್ಕರೆ - ಬಾತುಗಳಿಂದ ಪ್ರಾರಂಭಿಸಿ ಆಕರ್ಷಕ ಬಣ್ಣಗಳ ಸಣ್ಣಪುಟ್ಟ ಪಕ್ಷಿಗಳವರೆಗೆ ಅನೇಕ ಬಗೆಯ ಹಕ್ಕಿಗಳನ್ನು ನಾವು ಅಲ್ಲಿ ನೋಡಬಹುದು.

ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಕೀನ್ಯಾದ ಮಾಸೈ ಮಾರಾ ಸಂರಕ್ಷಿತ ಪ್ರದೇಶದಲ್ಲಿ ಸೆರೆಹಿಡಿದ ಪಕ್ಷಿಚಿತ್ರಗಳ ಸಂಗ್ರಹ ಇಲ್ಲಿದೆ. ಈ ಚಿತ್ರಗಳನ್ನೆಲ್ಲ ಎಚ್‌ಡಿ ವೀಡಿಯೋ ರೂಪದಲ್ಲಿ ಪ್ರಸ್ತುತಪಡಿಸಿರುವ ನಮ್ಮ ಈ ಪ್ರಯತ್ನ ನಿಮಗಿಷ್ಟವಾಗಬಹುದೆಂದು ಭಾವಿಸುತ್ತೇವೆ. ನೋಡಿ, ಪ್ರತಿಕ್ರಿಯೆ ತಿಳಿಸಿ, ನಿಮ್ಮ ಆಪ್ತರೊಡನೆಯೂ ಹಂಚಿಕೊಳ್ಳಿ. ನಮ್ಮ ಯೂಟ್ಯೂಬ್ ಚಾನೆಲ್‌ಗೆ ಸಬ್ಸ್‌ಕ್ರೈಬ್ ಮಾಡುವುದನ್ನೂ ಮರೆಯಬೇಡಿ!