ಇಜ್ಞಾನ ಡಾಟ್ ಕಾಮ್, ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳಿಗೆ ಮೀಸಲಾಗಿರುವ ಕನ್ನಡ ಜಾಲತಾಣ. ವೈಯಕ್ತಿಕ ಪ್ರಯತ್ನವಾಗಿ ಟಿ. ಜಿ. ಶ್ರೀನಿಧಿ ೨೦೦೭ರಲ್ಲಿ ಪ್ರಾರಂಭಿಸಿದ ಈ ತಾಣ ಲೇಖನ, ಸಂದರ್ಶನ, ಸುದ್ದಿ, ವೀಡಿಯೋ, ಗ್ಯಾಜೆಟ್ ಹಾಗೂ ಪುಸ್ತಕ ಪರಿಚಯಗಳನ್ನು ನಿರಂತರವಾಗಿ ಪ್ರಕಟಿಸುತ್ತ ಬಂದಿದೆ. ಈ ತಾಣದಲ್ಲಿ ಮೂಡಿಬರುವ ಬಹುತೇಕ ಲೇಖನಗಳು ಕನ್ನಡದ ಮುಂಚೂಣಿ ಪತ್ರಿಕೆಗಳಲ್ಲೂ ಪ್ರಕಟವಾಗುತ್ತವೆ.

ವಿಜ್ಞಾನ, ತಂತ್ರಜ್ಞಾನ, ಕನ್ನಡ ಮತ್ತು ಸಂಸ್ಕೃತಿ ಕುರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆ ಇಜ್ಞಾನ ಟ್ರಸ್ಟ್ ಸದ್ಯ ಈ ಜಾಲತಾಣವನ್ನು ನಿರ್ವಹಿಸುತ್ತಿದೆ. ವಿಜ್ಞಾನ ಸಂವಹನಕಾರ ಟಿ. ಜಿ. ಶ್ರೀನಿಧಿ ಈ ತಾಣದ ಸಂಪಾದಕರಾಗಿದ್ದಾರೆ.

೨೦೧೭ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಕನ್ನಡ ಬ್ಲಾಗ್ ಎಂಬ ಗೌರವ ಪಡೆದುಕೊಂಡಿದ್ದು ಇಜ್ಞಾನ ಡಾಟ್ ಕಾಮ್‌ನ ಹೆಮ್ಮೆಯ ಸಾಧನೆಗಳಲ್ಲೊಂದು.

ವಿಜ್ಞಾನವನ್ನು ಜನಸಾಮಾನ್ಯರಿಗೆ ಅವರದೇ ಭಾಷೆಯಲ್ಲಿ ಹೇಗೆ ತಲುಪಿಸಬಹುದೆಂದು ಸೊಗಸಾಗಿ ತೋರಿಸಿಕೊಟ್ಟ ಅಪ್ರತಿಮ ಸಂವಹನಕಾರ ಡಾ. ಬಿ ಜಿ ಎಲ್ ಸ್ವಾಮಿಯವರ ನೆನಪಿಗೆ ಈ ತಾಣವನ್ನು ಸಮರ್ಪಿಸಲಾಗಿದೆ.

Ejnana.com is a Kannada website dedicated to Science and Technology. Started as an individual effort by T G Srinidhi in 2007, it has been publishing articles, interviews, news, videos, gadgets and book reviews regularly. Most articles appearing on the website are also published in the leading periodicals of Karnataka.

This website is managed by Ejnana Trust, a non-profit organization based in Bengaluru focusing on activities related to Science, Technology, Kannada and Culture. Noted science communicator T G Srinidhi serves as the editor.

Winning the recognition as 'the most outstanding blog in Kannada' at the Indian Blogger Awards 2017 has been one of the proud achievements of ejnana.com. 

Ejnana.com is dedicated to the memory of Dr. B G L Swamy, a communicator par excellence who set an extraordinary example of how Science can be taken to masses in their language.