ಕಲಿಕೆಯನ್ನೂ ಆಟದಷ್ಟೇ ಆಸಕ್ತಿದಾಯಕವಾಗಿಸುವ ಎರಡು ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ
ಕಲಿಕೆಯನ್ನೂ ಆಟದಷ್ಟೇ ಆಸಕ್ತಿದಾಯಕವಾಗಿಸುವ ಎರಡು ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ|ejnana.com
ವೈವಿಧ್ಯ

ಪುಸ್ತಕ ಪರಿಚಯ: ವಿಜ್ಞಾನದಲ್ಲಿ ಮೋಜು

ಕಸವೆಂದು ಎಸೆಯುವ ವಸ್ತುಗಳನ್ನೂ ಕಲಿಕೆಗೆ ಹೇಗೆ ಉಪಯೋಗಿಸಬಹುದು ಎನ್ನುವುದಕ್ಕೆ ಇಲ್ಲಿನ ಪ್ರಯೋಗಗಳು ಉತ್ತಮ ಉದಾಹರಣೆಗಳು

ಇಜ್ಞಾನ ತಂಡ

ವಿಜ್ಞಾನದ ಕಲಿಕೆ ಕಷ್ಟ ಎನ್ನುವುದು ವ್ಯಾಪಕವಾಗಿ ಕೇಳಸಿಗುವ ಅಭಿಪ್ರಾಯ. ಶಾಲೆಯಲ್ಲೂ ಅಷ್ಟೇ, ವಿಜ್ಞಾನದ ಪಾಠಗಳು ಕ್ಲಿಷ್ಟವಾಗಿದ್ದರೆ ಅದು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನೇ ಹುಟ್ಟಿಸುವುದಿಲ್ಲ. ಈ ಅಭಿಪ್ರಾಯ ಬದಲಿಸಿ, ಕಲಿಕೆಯನ್ನೂ ಆಟದಷ್ಟೇ ಆಸಕ್ತಿದಾಯಕವಾಗಿಸುವ ಹಲವು ಪ್ರಯತ್ನಗಳು ಈವರೆಗೆ ನಡೆದಿವೆ.

ಮನೆಯಲ್ಲೇ ಇಂತಹ ಪ್ರಯತ್ನ ಮಾಡಲು ವಿದ್ಯಾರ್ಥಿಗಳಿಗೆ - ಪೋಷಕರಿಗೆ ನೆರವಾಗುವ ಎರಡು ಕೃತಿಗಳನ್ನು ನವಕರ್ನಾಟಕ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿದೆ. ಚೆಂಡು ಪುಟಿಯುವುದು ಏಕೆ, ನ್ಯೂಟನ್ನನ ಮೂರನೇ ನಿಯಮ ಏನು ಹೇಳುತ್ತದೆ, ವಕ್ರೀಭವನ ಎಂದರೇನು ಮುಂತಾದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳೇ ಸ್ವತಃ ಉತ್ತರ ಕಂಡುಕೊಳ್ಳಲು ನೆರವಾಗುವುದು ಈ ಪುಸ್ತಕಗಳ ವೈಶಿಷ್ಟ್ಯ. ಇದಕ್ಕಾಗಿ ಸುಲಭವಾಗಿ ಸಿಗುವ ವಸ್ತುಗಳನ್ನೇ ಬಳಸಿ ಮಾಡಬಹುದಾದ ಪ್ರಯೋಗಗಳನ್ನು ಇವು ವಿವರಿಸುತ್ತವೆ. ಬಹಳಷ್ಟು ಸಾರಿ ನಾವು ಕಸವೆಂದು ಎಸೆಯುವ ವಸ್ತುಗಳನ್ನೂ ಕಲಿಕೆಗೆ ಹೇಗೆ ಉಪಯೋಗಿಸಬಹುದು ಎನ್ನುವುದಕ್ಕೆ ಇಲ್ಲಿನ ಪ್ರಯೋಗಗಳು ಉತ್ತಮ ಉದಾಹರಣೆಗಳು.

ಆಕರ್ಷಕ, ವಿವರಣಾತ್ಮಕ ಚಿತ್ರಗಳಿಂದಾಗಿ ಇಲ್ಲಿನ ಪ್ರಯೋಗಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಸುಲಭ
ಆಕರ್ಷಕ, ವಿವರಣಾತ್ಮಕ ಚಿತ್ರಗಳಿಂದಾಗಿ ಇಲ್ಲಿನ ಪ್ರಯೋಗಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಸುಲಭejnana.com

ಪ್ರಯೋಗ ಹಾಗೂ ಆಟಿಕೆಗಳ ಮೂಲಕ ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಅರವಿಂದ ಗುಪ್ತ, ಈ ಪುಸ್ತಕಗಳ ಕರ್ತೃ. ಗಣಿತದಂತಹ ವಿಷಯಗಳನ್ನೂ ಸುಲಭವಾಗಿ ಬೋಧಿಸುವ ಪರಿಣತರಾದ ಶ್ರೀ ವಿ. ಎಸ್. ಎಸ್. ಶಾಸ್ತ್ರಿ ಇವನ್ನು ಕನ್ನಡಕ್ಕೆ ತಂದಿದ್ದರೆ. ರೇಷ್ಮಾ ಬಾರ್ವೆ ರಚಿಸಿರುವ ಆಕರ್ಷಕ, ವಿವರಣಾತ್ಮಕ ಚಿತ್ರಗಳಿಂದಾಗಿ ಇಲ್ಲಿನ ಪ್ರಯೋಗಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಸುಲಭವೆನಿಸುತ್ತದೆ.

ವಿಜ್ಞಾನದಲ್ಲಿ ಮೋಜು ಮತ್ತು ಕಸದಿಂದ ಅದ್ಭುತ ಆಟಿಕೆಗಳು ಮತ್ತು ಪ್ರಯೋಗಗಳು (ಮಕ್ಕಳಿಗಾಗಿ ವಿಜ್ಞಾನದ ಪ್ರಯೋಗಗಳು)

ಲೇಖಕರು: ಅರವಿಂದ ಗುಪ್ತ | ಕನ್ನಡಕ್ಕೆ: ವಿ. ಎಸ್. ಎಸ್. ಶಾಸ್ತ್ರಿ

ಚಿತ್ರಗಳು: ರೇಷ್ಮಾ ಬಾರ್ವೆ | ಪ್ರಕಾಶಕರು: ನವಕರ್ನಾಟಕ ಪ್ರಕಾಶನ

ಬೆಲೆ: ತಲಾ ರೂ. ೬೫ | ಪುಸ್ತಕ ಕೊಳ್ಳಲು: navakarnatakaonline.com

ಇಜ್ಞಾನ Ejnana
www.ejnana.com