ಕೋವಿಡ್-೧೯ ಪ್ರತಿಯೊಂದು ಹಂತವೂ ಅದರ ಪ್ರಸಾರಣೆಯನ್ನು ಕುರಿತ ನಿರ್ದಿಷ್ಟ ಪರಿಸ್ಥಿತಿಯನ್ನು ಸೂಚಿಸುತ್ತದೆ.
ಕೋವಿಡ್-೧೯ ಪ್ರತಿಯೊಂದು ಹಂತವೂ ಅದರ ಪ್ರಸಾರಣೆಯನ್ನು ಕುರಿತ ನಿರ್ದಿಷ್ಟ ಪರಿಸ್ಥಿತಿಯನ್ನು ಸೂಚಿಸುತ್ತದೆ.

ಕೋವಿಡ್-೧೯ ಹರಡುವಿಕೆಯ ನಾಲ್ಕು ಹಂತಗಳು

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಕೋವಿಡ್-೧೯ ಹರಡುವಿಕೆಯ ಹಂತಗಳ ಬಗ್ಗೆ ನಾವು ಆಗಿಂದಾಗ್ಗೆ ಕೇಳುತ್ತಿದ್ದೇವೆ. ಇಂತಹ ಪ್ರತಿಯೊಂದು ಹಂತವೂ ಅದರ ಪ್ರಸಾರಣೆಯನ್ನು ಕುರಿತ ನಿರ್ದಿಷ್ಟ ಪರಿಸ್ಥಿತಿಯನ್ನು ಸೂಚಿಸುತ್ತದೆ.

ಒಂದು ಪ್ರದೇಶದಲ್ಲಿ ರೋಗ ಮೊದಲಿಗೆ ಕಾಣಿಸಿಕೊಳ್ಳುವುದು ಮೊದಲ ಹಂತ. ಈ ಹಂತದಲ್ಲಿ ಆ ಪ್ರದೇಶದಲ್ಲಿರುವ ಜನರಲ್ಲಿ, ಅಥವಾ ಅಲ್ಲಿಗೆ ಹೋಗಿ ಬಂದವರಲ್ಲಿ ಮಾತ್ರ ರೋಗ ಕಾಣಿಸಿಕೊಳ್ಳುವುದು ಸಾಧ್ಯ.

ರೋಗಪೀಡಿತರ ಆಸುಪಾಸಿನಲ್ಲಿ ರೋಗ ಒಬ್ಬರಿಂದ ಒಬ್ಬರಿಗೆ ಹರಡಲು ಶುರುವಾಗುವುದು ಎರಡನೇ ಹಂತ. ಇದನ್ನು ಸ್ಥಳೀಯ ಪ್ರಸಾರಣೆ (ಲೋಕಲ್ ಟ್ರಾನ್ಸ್‌ಮಿಶನ್) ಎಂದು ಕರೆಯುತ್ತಾರೆ. ಈ ಹಂತದಲ್ಲಿ ರೋಗಪೀಡಿತರಿಗೆ ಸೋಂಕು ಎಲ್ಲಿಂದ ಬಂತು ಎನ್ನುವುದನ್ನು ಪತ್ತೆಮಾಡುವುದು, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯ.

ಸೋಂಕು ಇಡೀ ಸಮುದಾಯದಲ್ಲಿ ಹರಡಿ, ಯಾರಿಗೆ ಯಾರಿಂದ ಸೋಂಕು ತಗುಲಿದೆಯೆಂದು ಗುರುತಿಸಲು ಸಾಧ್ಯವಾಗದಿರುವುದು ಮೂರನೆಯ ಹಂತ. ಇದನ್ನು ಸಮುದಾಯ ಪ್ರಸಾರಣೆ (ಕಮ್ಯೂನಿಟಿ ಟ್ರಾನ್ಸ್‌ಮಿಶನ್) ಎನ್ನುತ್ತಾರೆ. ಈ ಹಂತದಲ್ಲಿ ರೋಗ ಬಹಳ ಕ್ಷಿಪ್ರವಾಗಿ ಹರಡುತ್ತದೆ ಹಾಗೂ ವೈದ್ಯಕೀಯ ವ್ಯವಸ್ಥೆಯ ಮೇಲೆ ವಿಪರೀತ ಒತ್ತಡಕ್ಕೆ ಕಾರಣವಾಗುತ್ತದೆ.

ಪರಿಸ್ಥಿತಿ ಕೈಮೀರಿ, ರೋಗ ದೇಶವ್ಯಾಪಿಯಾಗಿ ಹರಡಿಬಿಡುವುದು ನಾಲ್ಕನೆಯ ಹಾಗೂ ಅಂತಿಮ ಹಂತ. ಈ ಹಂತದಲ್ಲಿ ರೋಗದ ನಿಯಂತ್ರಣ ಸಾಧ್ಯವೇ ಇಲ್ಲವೆನ್ನುವಷ್ಟು ಕಠಿಣವಾಗಿಬಿಡುತ್ತದೆ. ಚೀನಾದಲ್ಲಿದ್ದ ಪರಿಸ್ಥಿತಿ, ಇದಕ್ಕೊಂದು ಉದಾಹರಣೆ.

ಇಟಲಿ, ಸ್ಪೇನ್ ಮುಂತಾದ ದೇಶಗಳು ಈಗಾಗಲೇ ಮೂರನೆಯ ಹಂತವನ್ನು ತಲುಪಿವೆ. ಭಾರತದ ಬಹುತೇಕ ಭಾಗಗಳು ಸದ್ಯ ಎರಡನೇ ಹಂತದಲ್ಲಿವೆಯಾದರೂ ಕೆಲವು ಪ್ರದೇಶಗಳಲ್ಲಿ ಸಮುದಾಯ ಪ್ರಸಾರಣೆಯನ್ನು ಕೂಡ ಗುರುತಿಸಲಾಗಿದೆ. ಹೀಗಾಗಿ ಭಾರತದ ಒಟ್ಟಾರೆ ಪರಿಸ್ಥಿತಿ (೨೦೨೦ರ ಏಪ್ರಿಲ್ ಮೊದಲ ವಾರದಲ್ಲಿ) ಎರಡು ಹಾಗೂ ಮೂರನೆಯ ಹಂತದ ನಡುವೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com