ಹಲವು ಮಹನೀಯರ ಪ್ರಯತ್ನಗಳಿಂದಾಗಿ ಸಾಧ್ಯವಾದ ಕ್ರಾಂತಿಕಾರಕ ಬದಲಾವಣೆಗಳು ಇಂದು ನಮ್ಮ ದೇಶವನ್ನು ಜಾಗತಿಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವಿಶಿಷ್ಟವೆನ್ನಬಹುದಾದ ಸ್ಥಾನಕ್ಕೆ ತಂದು ನಿಲ್ಲಿಸಿವೆ.
ಇದು ನಿಜಕ್ಕೂ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂಥದ್ದೇ ಸಮಸ್ಯೆ. ಈ ಸಮಸ್ಯೆಯಿಂದ ಪಾರಾಗುವ ಪ್ರಯತ್ನಗಳಲ್ಲಿ ಕೈಜೋಡಿಸುವ ಬದಲು ಬೇಡಿಕೆಗಳನ್ನಷ್ಟೇ ಮುಂದಿಟ್ಟುಕೊಂಡು ಕುಳಿತರೆ ಹೆಚ್ಚಿನ ಪ್ರಯೋಜನವೇನೂ ಆಗಲಾರದು.
ಪತ್ರಿಕೆಗಳ ವಿಜ್ಞಾನ ಪುಟಗಳು, ವಿಜ್ಞಾನ ಪತ್ರಿಕೆಗಳು ಇಂದು ಕಾಣೆಯಾಗುತ್ತಿವೆ. ಬದಲಾದ ಬೇಡಿಕೆಗಳಿಗೆ ಅನುಗುಣವಾಗಿ ನಾವು ಹೊಸ ಹಾದಿಗಳನ್ನು ಹುಡುಕಬೇಕಿದೆ. ಈ ಹಾದಿಯಲ್ಲಿ ಸುದೀರ್ಘ ಪಯಣ ಕೈಗೊಂಡಿರುವುದು ವಿಜ್ಞಾನ್ ಪ್ರಸಾರ್‌ನ ಹೆಚ್ಚುಗಾರಿಕೆ.