ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

'eಜ್ಞಾನ' ತಂದ ಸಂತೋಷ

ಕಳೆದ ಗುರುವಾರದಿಂದ (ಏಪ್ರಿಲ್ ೨೧, ೨೦೧೬) ವಿಜಯವಾಣಿಯಲ್ಲಿ ಪ್ರಕಟವಾಗುತ್ತಿರುವ 'eಜ್ಞಾನ' ಅಂಕಣದ ಮೊದಲ ಮೂರು ಕಂತುಗಳನ್ನು ಈ ವಾರದ 'ಇಫ್ರೆಶ್'ನಲ್ಲಿ ಖುಷಿಯಿಂದ ಪ್ರಕಟಿಸುತ್ತಿದ್ದೇವೆ. ಈ ಅಂಕಣ ಕುರಿತ ಹಲವು ಪ್ರತಿಕ್ರಿಯೆಗಳು ಬಂದಿವೆ, ಬರುತ್ತಿವೆ. ಇಂತಹ ಪ್ರತಿಕ್ರಿಯೆಗಳೇ ಬರವಣಿಗೆಗೆ ಸ್ಫೂರ್ತಿತುಂಬುವ ಸಂಗತಿಗಳು. ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ದಯಮಾಡಿ ಹೀಗೆಯೇ ಹಂಚಿಕೊಳ್ಳುತ್ತಿರಿ, ಬರಹಗಳು ಹೇಗಿದ್ದರೆ ನಿಮಗಿಷ್ಟ ಎಂದು ಹೇಳುವುದನ್ನೂ ಮರೆಯದಿರಿ.

ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!


ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ 'ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!' ಬರುವ ಮೇ ೮ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕವನ್ನು ನೀವೀಗ ಆನ್‌ಲೈನ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು ಹಾಗೂ ಶೇ. ೨೦ರ ವಿಶೇಷ ರಿಯಾಯಿತಿ ಪಡೆಯಬಹುದು!

ವಿಜಯವಾಣಿಯಲ್ಲಿ ಇಜ್ಞಾನ

ಟಿ. ಜಿ. ಶ್ರೀನಿಧಿಯವರ ದೈನಿಕ ಅಂಕಣ 'eಜ್ಞಾನ' ಏಪ್ರಿಲ್ ೨೧, ೨೦೧೬ರಿಂದ ವಿಜಯವಾಣಿಯಲ್ಲಿ ಪ್ರತಿದಿನವೂ ಪ್ರಕಟವಾಗುತ್ತದೆ (ಪುರವಣಿ ವಿಭಾಗದಲ್ಲಿ). ತಂತ್ರಜ್ಞಾನ ಕ್ಷೇತ್ರದ ವಿವಿಧ ಸಂಗತಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡುವ ಪ್ರಯತ್ನ ಇದು. ಅಂಕಣದ ಕುರಿತು ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ.

ಪಾರಂಪರಿಕ ದಿನದಂದು ಐಟಿ ಇತಿಹಾಸದ ನೆನಪು

ಇದು ಇಜ್ಞಾನ ಡಾಟ್ ಕಾಮ್‌ನಲ್ಲಿ ಇಂದಿನಿಂದ ಪ್ರಕಟವಾಗುತ್ತಿರುವ ಹೊಸ ಸಾಪ್ತಾಹಿಕ ಅಂಕಣ 'ಇಫ್ರೆಶ್'ನ ಮೊದಲ ಕಂತು. ಅಂಕಣದ ಬಗ್ಗೆ ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ!
ಇವತ್ತು (ಏಪ್ರಿಲ್ ೧೮) ವರ್ಲ್ಡ್ ಹೆರಿಟೇಜ್ ಡೇ, ಅಂದರೆ ವಿಶ್ವ ಪಾರಂಪರಿಕ ದಿನವಂತೆ. ಹಾಗೆಂದು ಮೊದಲು ನೆನಪಿಸಿದ್ದು ಫೇಸ್‌ಬುಕ್. ಒಳ್ಳೆಯದು ಬಿಡಿ, ಫೇಸ್‌ಬುಕ್‌ನಲ್ಲಿ ಅವರಿವರ ಜಗಳದ ಸುದ್ದಿಯ ಜೊತೆಗೆ ಒಂದಷ್ಟು ಉಪಯುಕ್ತ ಮಾಹಿತಿಯೂ ಸಿಗುತ್ತದೆ ಎಂದಾಯಿತು.

ವರ್ಲ್ಡ್ ಹೆರಿಟೇಜ್ ಎಂದತಕ್ಷಣ ನಮಗೆ ನೆನಪಿಗೆ ಬರುವುದು ವಿಶ್ವ ಪಾರಂಪರಿಕ ತಾಣಗಳು. ಈಜಿಪ್ಟಿನ ಪಿರಮಿಡ್‌ಗಳಿಂದ ಮಾಲಿಯ ಟಿಂಬಕ್ಟುವರೆಗೆ, ರಾಜಸ್ಥಾನದ ಕೋಟೆಗಳಿಂದ ನಮ್ಮ ಪಶ್ಚಿಮಘಟ್ಟಗಳವರೆಗೆ ಅದೆಷ್ಟೋ ತಾಣಗಳನ್ನು ಯುನೆಸ್ಕೋ ಈ ಪಟ್ಟಿಗೆ ಸೇರಿಸಿದೆ.

ಇಜ್ಞಾನದಿಂದ ಹೊಸದೊಂದು ಪುಸ್ತಕ

ಇಜ್ಞಾನ ಡಾಟ್ ಕಾಮ್ ಹೊಸದೊಂದು ಪುಸ್ತಕವನ್ನು ನಿಮಗೆ ತಲುಪಿಸಲು ಸಜ್ಜಾಗುತ್ತಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ. ನಿರೀಕ್ಷಿಸಿ!


ಜಾಲಲೋಕದಲ್ಲಿ ಚಿತ್ರಗಳ ಛಾಯೆ

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟವಾದ ಮೊದಲ ಚಿತ್ರ
ಈ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ಇದೆಯಲ್ಲ, ಇದು ಮಾಹಿತಿಯ ಮಹಾಸಾಗರ. ಎಲ್ಲ ವಿಷಯಗಳನ್ನು ಕುರಿತ ಎಲ್ಲ ಬಗೆಯ ಮಾಹಿತಿಯೂ ಇಲ್ಲಿ ಲಭ್ಯ. ಈ ಮಾಹಿತಿ ಯಾವ ರೂಪದಲ್ಲಾದರೂ ಇರಬಹುದು - ಪಠ್ಯ, ಚಿತ್ರ, ಧ್ವನಿ, ವೀಡಿಯೋ,... ಹೀಗೆ.

ಚಿತ್ರರೂಪದ ಮಾಹಿತಿಯೆಂದರೆ ನಮಗೆ ಬಹಳ ಪ್ರೀತಿ. ಚಿತ್ರಗಳಿಲ್ಲದ ಉದ್ದನೆಯ ಬರಹವನ್ನೂ ಅಷ್ಟೇ ಉದ್ದದ ಚಿತ್ರಲೇಖನವನ್ನೂ ಒಟ್ಟಿಗೆ ಕೊಟ್ಟರೆ ಚಿತ್ರಗಳಿರುವ ಲೇಖನವನ್ನು ಮೆಚ್ಚುವವರೇ ಹೆಚ್ಚುಮಂದಿ. 'ಪಾತಾಳದಲ್ಲಿ ಪಾಪಚ್ಚಿ' ಕೃತಿಯಲ್ಲಿ ಪಾಪಚ್ಚಿ ಹೇಳುತ್ತಾಳಲ್ಲ, ಹಾಗೆ ಚಿತ್ರಗಳಿಲ್ಲದ ಬರಹ ಹೂವಿಲ್ಲದ ಗಿಡದಂತೆ!

ಹಾಗಾಗಿ ಜಾಲಲೋಕದಲ್ಲೂ ಚಿತ್ರಗಳ ಭರಾಟೆ ಜೋರು. ಚಿತ್ರಗಳಿಲ್ಲದ ಜಾಲತಾಣಗಳೇ ಇಲ್ಲವೆಂದರೂ ಸರಿಯೇ. ಸಮಾಜಜಾಲಗಳಲ್ಲಂತೂ (ಸೋಶಿಯಲ್ ನೆಟ್‌ವರ್ಕ್) ನಾವು ಕೂತಿದ್ದು - ನಿಂತದ್ದು. ಕಂಡಿದ್ದು - ತಿಂದದ್ದರ ಚಿತ್ರಗಳನ್ನೆಲ್ಲ ಹಂಚಿಕೊಳ್ಳುತ್ತಲೇ ಇರುತ್ತೇವೆ.

ಇಜ್ಞಾನ ಹತ್ತನೆಯ ವರ್ಷ

ಇಜ್ಞಾನ ಸದ್ಯದಲ್ಲೇ ತನ್ನ ಒಂಬತ್ತನೇ ವರ್ಷವನ್ನು ಪೂರೈಸಲಿದೆ. ಹತ್ತನೆಯ ವರ್ಷವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಡನೆ ಆಚರಿಸುವ ಉದ್ದೇಶ ನಮ್ಮದು. ಹೆಚ್ಚಿನ ವಿವರಗಳನ್ನು ಇಷ್ಟರಲ್ಲೇ ಹಂಚಿಕೊಳ್ಳಲಾಗುವುದು. ನಿರೀಕ್ಷಿಸಿ!

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ, ಆಯೋಜನೆಯಲ್ಲಿ ನೆರವಾಗುವ ಮೂಲಕ ನೀವು ನಮ್ಮೊಡನೆ ಕೈಜೋಡಿಸಬಹುದು. ಕಾರ್ಯಕ್ರಮಗಳ ಆಯೋಜನೆಯಲ್ಲಿ ನೆರವು ನೀಡುವ ಆಸಕ್ತಿಯಿರುವವರು, ಆ ಕುರಿತು ಪ್ರಶ್ನೆಗಳಿರುವವರು ದಯಮಾಡಿ ನಮ್ಮನ್ನು ಸಂಪರ್ಕಿಸಿ. ಇಮೇಲ್ ಕಳುಹಿಸಲು ಬಯಸುವವರು ಈ ವಿಳಾಸವನ್ನು ಸಂಪರ್ಕಿಸಬಹುದು: ejnana.com[at]gmail.com  
badge