ಮಂಗಳವಾರ, ಫೆಬ್ರವರಿ 16, 2016

ಮಕ್ಕಳಿಗೊಂದು ಅರಿವಿನ ವೇದಿಕೆ

ರಂಗಸ್ವಾಮಿ ಮೂಕನಹಳ್ಳಿ

ಬೆಂಗಳೂರಿನ ವಸಂತ ಪ್ರಕಾಶನ ಸಂಸ್ಥೆ 'ಪುಸ್ತಕ ಮಹಲ್ ' ಪ್ರಕಾಶನ ಸಂಸ್ಥೆಯ ಸಹಭಾಗಿತ್ವದಲ್ಲಿ  'ಮಕ್ಕಳ ಜ್ಞಾನಕೋಶ'ವನ್ನು ನಾಲ್ಕು ಸಂಪುಟಗಳಲ್ಲಿ ಹೊರತರಲಿದೆ. ಆ ಪೈಕಿ ಮೊದಲೆರಡು ಸಂಪುಟಗಳು ಇದೀಗ ಮಾರುಕಟ್ಟೆಗೆ ಬಂದಿದ್ದು, ಉಳಿದೆರಡು ಸದ್ಯದಲ್ಲೇ ಸಹೃದಯರ ಕೈಸೇರಲಿದೆ .

ಮಂಜುಗಡ್ಡೆ ನೀರಿನ ಮೇಲೆ ಏಕೆ ತೇಲುತ್ತದೆ? ನಾಲಿಗೆಗೆ ರುಚಿ ಹೇಗೆ ತಿಳಿಯುತ್ತದೆ? ಆಹಾರವಿಲ್ಲದೆ ಮನಷ್ಯ ಎಷ್ಟು ದಿನ ಬದುಕಿರಬಹುದು? ಶುಷ್ಕ ಹಿಮ ಎಂದರೇನು? ವಿಶ್ವವು ಹೇಗೆ ಆಸ್ತಿತ್ವಕ್ಕೆ ಬಂತು? ಇಂಗ್ಲಿಷ್ ಭಾಷೆ ಹೇಗೆ ಜನ್ಮ ತಾಳಿತು? ನಮಗೇಕೆ ಜ್ವರ ಬರುತ್ತದೆ? ಜನ ಮೊದಲು ಹಣವನ್ನು ಬಳಸಿದ್ದು ಯಾವಾಗ? ಪೈ ಏಕೆ ವಿಶಿಷ್ಟ ಸಂಖ್ಯೆ? - ಹೀಗೆ ವಿಜ್ಞಾನ  ತಂತ್ರಜ್ಞಾನ, ಸಸ್ಯ, ಪ್ರಾಣಿ, ವಿಶ್ವ, ಅಂತರಿಕ್ಷ, ವೈದ್ಯಕೀಯ, ಪ್ರಕೃತಿ ಪರಿಸರ, ವ್ಯಕ್ತಿ, ಅನ್ವೇಷಣೆ ಎಲ್ಲವನ್ನೂ ಕುರಿತು ಮಕ್ಕಳ ಮನದಲ್ಲಿ ಮೂಡಬಹುದಾದ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಮಕ್ಕಳ ಮನಸ್ಸಿನಲ್ಲಿ ಉದ್ಭವವಾಗುವ ಪ್ರಶ್ನೆಗಳಿಗೆ ಡಾ . ಎಸ್ , ಹೇಮಲತಾ , ಡಾ . ಎಸ್ . ಲೀಲಾ , ಡಾ . ಪ್ರಕಾಶ್ ಸಿ . ರಾವ್ , ಬಿ . ವಿ . ಸುಭದ್ರಾ , ಬಿ .ಎಸ್ . ಭಗವಾನ್ , ಹಾಗು ಸುಮಂಗಲಾ  ಎಸ್ . ಮುಮ್ಮಿಗಟ್ಟಿ ಉತ್ತರಿಸಿದ್ದಾರೆ. ಡಾ . ಟಿ . ಆರ್ . ಅನಂತರಾಮು ಈ ಎಲ್ಲಾ ಸಂಪುಟಗಳ ಸಂಪಾದಕರು .

ಈ ಪುಸ್ತಕವನ್ನು ಮಕ್ಕಳ ಜ್ಞಾನಕೋಶ ಎಂದು ಹೆಸರಿಸಿದ್ದಾರೆ, ಆದರೆ ಮಕ್ಕಳಷ್ಟೇ ಅಲ್ಲ ಎಲ್ಲಾ ವಯೋಮಾನದವರು ಅವಶ್ಯ ಓದಬೇಕಾದ, ನಿಮ್ಮ ಮನೆಯಲ್ಲಿ ಇರಲೇಬೇಕಾದ ಪುಸ್ತಕಗಳು ಇವು.

ಮಕ್ಕಳ ಜ್ಞಾನಕೋಶ - ಮಕ್ಕಳಿಗೊಂದು ಅರಿವಿನ ವೇದಿಕೆ
ಸಂಪಾದಕರು: ಡಾ. ಟಿ. ಆರ್. ಅನಂತರಾಮು
ಪ್ರತಿ ಸಂಪುಟದ ಬೆಲೆ: ರೂ. ೨೨೫
ಪ್ರಕಾಶಕರು: ವಸಂತ ಪ್ರಕಾಶನ, ೩೬೦, ೧೦ ನೇ  ' ಬಿ ' ಮುಖ್ಯರಸ್ತೆ,
ಜಯನಗರ ೩ ನೇ ಬ್ಲಾಕ್, ಬೆಂಗಳೂರು -೧೧

ಕಾಮೆಂಟ್‌ಗಳಿಲ್ಲ:

badge