ಬುಧವಾರ, ಡಿಸೆಂಬರ್ 23, 2015

ಹೊಸ ಪುಸ್ತಕ: 'ಕಂಪ್ಯೂಟರ್‌ಗೆ ಪಾಠ ಹೇಳಿ...'

ನಮ್ಮಿಂದ ಹೇಳಿಸಿಕೊಳ್ಳದೆ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡುವುದಿಲ್ಲ; ಅದು ಏನು ಮಾಡುವುದಿದ್ದರೂ ನಾವು ಹೇಳಿದ್ದನ್ನಷ್ಟೆ, ಹೇಳಿದಂತೆಯೇ ಮಾಡುತ್ತದೆ ಎನ್ನುವುದು ನಮಗೆ ಗೊತ್ತು. ಆದರೆ ನಮಗೇನು ಬೇಕು ಎನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ?

ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್‌ವೇರನ್ನು ಕೊಂಡುಕೊಂಡರೆ ಆಯಿತು ನಿಜ. ಆದರೆ ಅದನ್ನು ಮೊದಲಿಗೆ ಯಾರೋ ಸಿದ್ಧಪಡಿಸಿರಬೇಕು ತಾನೆ? ಹಾಗಾದರೆ ಸಾಫ್ಟ್‌ವೇರನ್ನು ಸಿದ್ಧಪಡಿಸುವುದು ಎಂದರೇನು, ಮತ್ತು ಅದು ಸಾಧ್ಯವಾಗುವುದು ಹೇಗೆ?


ತರ್ಕ (ಲಾಜಿಕ್), ಆಲ್ಗರಿದಂ (ಕ್ರಮಾವಳಿ), ಫ್ಲೋಚಾರ್ಟ್ (ಪ್ರವಾಹನಕ್ಷೆ) ಇತ್ಯಾದಿಗಳಿಂದ ಪ್ರಾರಂಭಿಸಿ ಪ್ರೋಗ್ರಾಮಿಂಗ್, ಸಾಫ್ಟ್‌ವೇರ್ ಇಂಜಿನಿಯರಿಂಗ್‌ನಂತಹ ವಿಷಯಗಳವರೆಗೆ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಅಂಶಗಳನ್ನು ಸರಳವಾಗಿ ಪರಿಚಯಿಸುವ ಪ್ರಯತ್ನವೇ ಟಿ. ಜಿ. ಶ್ರೀನಿಧಿಯವರ ಈ ಪುಸ್ತಕ.

ನವಕರ್ನಾಟಕದ ಜಾಲತಾಣದಲ್ಲಿ ನೀವು ಈ ಪುಸ್ತಕವನ್ನು ಕೊಳ್ಳಬಹುದು, 'ರೀಡ್ ಸ್ಯಾಂಪಲ್' ಮೇಲೆ ಕ್ಲಿಕ್ ಮಾಡುವ ಮೂಲಕ ಆಯ್ದ ಭಾಗಗಳನ್ನು ಉಚಿತವಾಗಿ ಓದಲೂಬಹುದು.

ಕೊಳ್ಳಿ, ಓದಿ, ಪ್ರತಿಕ್ರಿಯೆ ನೀಡಿ, ಪ್ರೋತ್ಸಾಹಿಸಿ.

ಕಾಮೆಂಟ್‌ಗಳಿಲ್ಲ:

badge