ಶುಕ್ರವಾರ, ನವೆಂಬರ್ 27, 2015

ಡಿಸೆಂಬರ್ ೧೯-೨೦: ಬೆಂಗಳೂರಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ

ಇಜ್ಞಾನ ವಾರ್ತೆ

ಕೆಲ ತಿಂಗಳ ಹಿಂದೆ ಬೆಂಗಳೂರಿನ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ನಡೆದ ಕನ್ನಡ ವಿಜ್ಞಾನ ಲೇಖಕರ ಶಿಬಿರ ನಿಮಗೆ ನೆನಪಿರಬಹುದು. ಇದೀಗ ಕನ್ನಡ ಮತ್ತು ವಿಜ್ಞಾನ ಬರವಣಿಗೆಗೆ ಸಂಬಂಧಪಟ್ಟ ಇನ್ನೊಂದು ಕಾರ್ಯಕ್ರಮ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿ ನಡೆಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶ. ವಿಕಿಪೀಡಿಯ ಪರಿಚಯವಿಲ್ಲದವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು.
ಹೆಚ್ಚಿನ ವಿವರಗಳು ಇಲ್ಲಿವೆ (ದೊಡ್ಡದಾಗಿ ತೆರೆಯಲು ಚಿತ್ರದ ಮೇಲೆ ಕ್ಲಿಕ್ ಮಾಡಿ).


ನೋಂದಾಯಿಸಿಕೊಳ್ಳಲು ಭೇಟಿನೀಡಬೇಕಾದ ವಿಳಾಸ: http://bitly.com/kndsciwp

ಕಾಮೆಂಟ್‌ಗಳಿಲ್ಲ:

badge