ಗುರುವಾರ, ನವೆಂಬರ್ 12, 2015

ವಾಸ್ತವವಲ್ಲದ ವಾಸ್ತವ

ಟಿ. ಜಿ. ಶ್ರೀನಿಧಿ


ಈಗಿನ ಅಜ್ಜ-ಅಜ್ಜಿಯರು ಚಿಕ್ಕಮಕ್ಕಳಾಗಿದ್ದಾಗ ಜಾತ್ರೆ-ಸಂತೆಗಳಲ್ಲಿ ಬಯಾಸ್ಕೋಪ್ (ಅಥವಾ ಬಯೋಸ್ಕೋಪ್) ಎನ್ನುವುದೊಂದು ಆಕರ್ಷಣೆ ಇರುತ್ತಿತ್ತಂತೆ. ದಪ್ಪನೆಯದೊಂದು ಪೆಟ್ಟಿಗೆ, ಅದರೊಳಗೆ ಇಣುಕಲೊಂದು ಕಿಂಡಿ - ಇದು ಬಯಾಸ್ಕೋಪಿನ ಸ್ವರೂಪ. ನಾಲ್ಕಾಣೆಯನ್ನೋ ಎಂಟಾಣೆಯನ್ನೋ ಕೊಟ್ಟು ಆ ಪೆಟ್ಟಿಗೆಯೊಳಗೆ ಇಣುಕಿದರೆ ಮುಂಬಯಿ, ದೆಹಲಿ, ಆಗ್ರಾದ ದೃಶ್ಯಗಳೆಲ್ಲ ಕಣ್ಣೆದುರು ಮೂಡುತ್ತಿದ್ದವು. ಬಾಣಾವರದ ಸಂತೆಯಲ್ಲೇ ಭಾರತ ದರ್ಶನ!

ಕೆಲ ವರ್ಷಗಳ ನಂತರ ಇಂತಹವೇ ಪೆಟ್ಟಿಗೆಗಳು ಇನ್ನು ಸ್ವಲ್ಪ ಚಿಕ್ಕದಾಗಿ 'ವ್ಯೂ ಮಾಸ್ಟರ್' ಎಂಬ ಹೆಸರಿನೊಡನೆ ಮಕ್ಕಳ ಕೈಗೆ ಬಂದವು. ಗುಂಡನೆಯ ಡಿಸ್ಕುಗಳನ್ನು ಪುಟ್ಟದೊಂದು ಸಾಧನದೊಳಕ್ಕೆ ಸೇರಿಸಿ ಇಣುಕಿ ನೋಡಿದರೆ ಅದರಲ್ಲಿನ ಚಿತ್ರಗಳು ನಮ್ಮ ಕಣ್ಮುಂದೆ ಮೂಡುತ್ತಿದ್ದವು (ಈಗ ಇದರ ಥ್ರೀಡಿ ಆವೃತ್ತಿಯೂ ಲಭ್ಯ).


ಇಲ್ಲದ ದೃಶ್ಯಗಳನ್ನು ಇರುವಂತೆ ತೋರಿಸುವ, ನಮ್ಮನ್ನು ಭ್ರಮಾಲೋಕಕ್ಕೆ ಕರೆದೊಯ್ಯುವ 'ವರ್ಚುಯಲ್ ರಿಯಾಲಿಟಿ' ತಂತ್ರಜ್ಞಾನಕ್ಕೆ ಇವು ಪ್ರಾಥಮಿಕ ಉದಾಹರಣೆಗಳೆನ್ನಬಹುದು.

ನೈಜ ಅಸ್ತಿತ್ವವಿಲ್ಲದ ವಸ್ತು-ಸಂಗತಿಗಳನ್ನು ಕೃತಕವಾಗಿ ರೂಪಿಸಿ ಅವು ನೈಜವೇ ಇರಬಹುದೇನೋ ಎನ್ನುವ ಭಾವನೆ ಬರುವಂತೆ ನಮ್ಮೆದುರು ಪ್ರಸ್ತುತಪಡಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.

ಈ ತಂತ್ರಜ್ಞಾನದ ಬಗೆಗೊಂದು ವಿಶೇಷ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ: https://srinidhi.atavist.com/vr

ಕಾಮೆಂಟ್‌ಗಳಿಲ್ಲ:

badge