ಶನಿವಾರ, ಸೆಪ್ಟೆಂಬರ್ 5, 2015

ಟೀವಿಯನ್ನು ಸ್ಮಾರ್ಟ್ ಮಾಡೋಣ ಬನ್ನಿ!


ಒಂದು ಕಾಲವಿತ್ತು, ಬೀದಿಗೊಂದು ಟೀವಿ ಇದ್ದರೆ ಆಗ ಅದೇ ಹೆಚ್ಚು. ಶುಕ್ರವಾರದ ಚಿತ್ರಮಂಜರಿ - ಭಾನುವಾರದ ಚಲನಚಿತ್ರಗಳನ್ನೆಲ್ಲ ನೋಡಲು ಬರುವವರನ್ನು ಸಂಭಾಳಿಸುವ ಹೆಚ್ಚುವರಿ ಜವಾಬ್ದಾರಿ ಆಗಿನ ಟೀವಿ ಮಾಲೀಕರಿಗೆ ಉಚಿತವಾಗಿ ದೊರಕುತ್ತಿತ್ತು. ಟೀವಿ ನೋಡಲು ನೆರೆಮನೆಗೆ ಹೋಗುವ ವ್ಯವಸ್ಥೆ ಅಂದಿನ ಕಾಲದ ಸೋಶಿಯಲ್ ನೆಟ್‌ವರ್ಕ್ ಆಗಿತ್ತು ಎಂದರೂ ಸರಿಯೇ!

ಮುಂದೆ ಟೀವಿಯ ಜನಪ್ರಿಯತೆ ಹಾಗೂ ಅದನ್ನು ಕೊಳ್ಳುವ ಶಕ್ತಿಗಳೆರಡೂ ಹೆಚ್ಚಿದಂತೆ ಎಲ್ಲ ಮನೆಗಳಿಗೂ ಟೀವಿಯ ಆಗಮನವಾಯಿತು. ಕಪ್ಪು ಬಿಳುಪು ಹೋಗಿ ಬಣ್ಣದ ಟೀವಿ ಬಂತು, ಫ್ಲ್ಯಾಟ್ ಸ್ಕ್ರೀನ್ - ಎಲ್‌ಸಿಡಿ - ಎಲ್‌ಇಡಿ ಟೀವಿಗಳ ಪರಿಚಯವಾಯಿತು, ನೈಜ ದೃಶ್ಯದಷ್ಟೇ ಸುಸ್ಪಷ್ಟವಾಗಿ ಚಿತ್ರಗಳನ್ನು ಪ್ರದರ್ಶಿಸುವ ಹೈ ಡೆಫನಿಶನ್ (ಎಚ್‌ಡಿ) ಟೀವಿಗಳೂ ಬಂದವು.


ಎಚ್‌ಡಿ ಟೀವಿಗಳ ಜನಪ್ರಿಯತೆಯ ಬಗ್ಗೆ ಮಾತನಾಡುವಂತೆಯೇ ಇಲ್ಲ. ಈಗಿನ ಬಹುತೇಕ ಮನೆಗಳಲ್ಲಿ ಅವು ಆಗಲೇ ಹಳೆಯದಾಗಿಬಿಟ್ಟಿವೆ. ಎಚ್‌ಡಿ ಟೀವಿ ಇದ್ದಮೇಲೆ ಎಚ್‌ಡಿ ಚಿತ್ರಗಳನ್ನು ನೋಡದಿದ್ದರೆ ಹೇಗೆ? ಟೀವಿ ಚಾನಲ್ಲುಗಳೂ ಎಚ್‌ಡಿ ಪ್ರಸಾರ ಪ್ರಾರಂಭಿಸಿವೆ; ಕೇಬಲ್ ಮೂಲಕವೋ ಡಿಟಿಎಚ್ ಮೂಲಕವೋ ನಮ್ಮನ್ನು ತಲುಪುತ್ತಲೂ ಇವೆ. ಎಚ್‌ಡಿ ಗುಣಮಟ್ಟದಲ್ಲಿ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಕ್ಯಾಮೆರಾಗಳಿಗೆ - ಮೊಬೈಲುಗಳಿಗೂ ಬಂದುಬಿಟ್ಟಿದೆ.

ಎಚ್‌ಡಿ ಟೀವಿ ಇದೆ, ಎಚ್‌ಡಿ ಚಾನಲ್ಲುಗಳೂ ಇವೆ. ಇನ್ನೇನು ಮತ್ತೆ, ನಾವು ತಂತ್ರಜ್ಞಾನದ ಉತ್ತುಂಗದಲ್ಲಿದ್ದಂತೆಯೇ ತಾನೆ?

ಕೊಂಚ ತಾಳಿ, ನಮ್ಮಲ್ಲಿ ಬಹುತೇಕ ಮನೆಗಳಲ್ಲಿರುವ ಟೀವಿಗಳು - ವಿಶೇಷವಾಗಿ ಒಂದೆರಡು ವರ್ಷಗಳ ಹಿಂದೆ ಕೊಂಡವು - ಇನ್ನೂ ಸ್ಮಾರ್ಟ್ ಆಗಿಲ್ಲ!

ಅರೆ, ಟೀವಿ 'ಸ್ಮಾರ್ಟ್' ಆಗುವುದು ಎಂದರೇನು?

ಇಜ್ಞಾನ ಡಾಟ್ ಕಾಮ್‌ನಲ್ಲೊಂದು ವಿಶೇಷ ಲೇಖನ, 'ಟೀವಿಯನ್ನು ಸ್ಮಾರ್ಟ್ ಮಾಡೋಣ ಬನ್ನಿ!'

>>>> ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

2 ಕಾಮೆಂಟ್‌ಗಳು:

Anant Vaidya ಹೇಳಿದರು...

ತುಂಬಾ ಸುಂದರವಾದ ಮಾರ್ಮಿಕ ಲೇಖನ.

Anant Vaidya ಹೇಳಿದರು...

ಸುಂದರವಾದ ಮಾರ್ಮಿಕ ಲೇಖನ

badge