ಸೋಮವಾರ, ಆಗಸ್ಟ್ 3, 2015

ಸೆಲ್ಫಿ ಸಮಾಚಾರಫೋಟೋ ಕ್ಲಿಕ್ಕಿಸುವ ಹವ್ಯಾಸವಿರುವವರಿಗೆ ಯಾವಾಗಲೂ ಒಂದು ಸಮಸ್ಯೆ: ಅವರು ಎಷ್ಟೇ ಒಳ್ಳೆಯ ಛಾಯಾಗ್ರಾಹಕರಾಗಿದ್ದರೂ ಅವರ ಫೋಟೋವನ್ನು ಬೇರೊಬ್ಬ ಛಾಯಾಗ್ರಾಹಕನೇ ಕ್ಲಿಕ್ಕಿಸಬೇಕು. ಅವರ ಕಲ್ಪನಾಶಕ್ತಿಯೇನಿದ್ದರೂ ಬೇರೆಯವರ ಚಿತ್ರಗಳನ್ನು ಕ್ಲಿಕ್ಕಿಸಲಷ್ಟೇ ಸೀಮಿತವಾಗಿರಬೇಕು, ಇಲ್ಲವೇ ಕ್ಯಾಮೆರಾವನ್ನು ತನ್ನತ್ತ ತಿರುಗಿಸಿಕೊಂಡು ಬೇಕಾದಂತೆ ಫೋಟೋ ಕ್ಲಿಕ್ಕಿಸಲು ತಿಣುಕಬೇಕು.

ಮೊಬೈಲ್ ಫೋನ್ ಕ್ಯಾಮೆರಾಗಳು ಜನಪ್ರಿಯವಾಗುವವರೆಗೆ ಈ ಸಮಸ್ಯೆ ಸಾಕಷ್ಟು ವ್ಯಾಪಕವಾಗಿಯೇ ಇತ್ತು. ಮೊಬೈಲಿನಲ್ಲೇ ಕ್ಯಾಮೆರಾ ಬಂದಮೇಲೆ ಸ್ವಂತಚಿತ್ರವನ್ನು ಕ್ಲಿಕ್ಕಿಸಿಕೊಳ್ಳಲು ದೊಡ್ಡ ಕ್ಯಾಮೆರಾವನ್ನು ತಿರುವುಮುರುವಾಗಿ ಹಿಡಿದುಕೊಂಡು ತಿಣುಕುವುದು ತಪ್ಪಿತು!


ಮೊಬೈಲನ್ನೂ ತಿರುವುಮುರುವಾಗಿ ಹಿಡಿದುಕೊಳ್ಳಬೇಕಾದ ಪರಿಸ್ಥಿತಿ ದೂರವಾದದ್ದು ಪ್ರತಿ ಮೊಬೈಲಿನಲ್ಲೂ ಎರಡೆರಡು ಕ್ಯಾಮೆರಾ ಬಂದಮೇಲೆ. 'ಫ್ರಂಟ್ ಕ್ಯಾಮೆರಾ' ಎಂಬ ಈ ಸೌಲಭ್ಯ ಮೊಬೈಲ್ ವೈಶಿಷ್ಟ್ಯಗಳ ಪಟ್ಟಿಗೆ ಸೇರಿದಲ್ಲಿನಿಂದ ಫೋನಿನ ಪರದೆ ನಮ್ಮ ಪಾಲಿಗೆ ಅಕ್ಷರಶಃ ಕನ್ನಡಿಯೇ ಆಯಿತು; ಬೇಕಾದಾಗ ಬೇಕಾದ ಭಂಗಿಯಲ್ಲಿ ನಮ್ಮನಮ್ಮ ಸ್ವಂತಚಿತ್ರಗಳನ್ನು ನಾವೇ ಕ್ಲಿಕ್ಕಿಸಿಕೊಳ್ಳುವುದು ಸಾಧ್ಯವಾಯಿತು.

ಸದ್ಯ ವಿಶ್ವದೆಲ್ಲೆಡೆ ಅತಿಯೆನಿಸುವಷ್ಟು ಜನಪ್ರಿಯವಾಗಿರುವ ಸೆಲ್ಫಿ ವ್ಯಾಮೋಹ ಬೆಳೆದದ್ದು ಹೀಗೆ.

ಸರ್ವಾಂತರ್ಯಾಮಿಯಾಗಿ ಬೆಳೆದಿರುವ ಸೆಲ್ಫಿ ವಿದ್ಯಮಾನದ ಕುರಿತ ವಿಶೇಷ ಲೇಖನ ಇಲ್ಲಿದೆ. ಓದಿ, ಪ್ರತಿಕ್ರಿಯೆ ನೀಡಿ.

ಈ ಲೇಖನದಲ್ಲಿ ಬಳಸಲಾಗಿರುವ ಹೊಸಬಗೆಯ ವಿನ್ಯಾಸ ಹೇಗಿದೆ? ನಿಮ್ಮ ಅನಿಸಿಕೆ ತಿಳಿಯುವ ಕುತೂಹಲ ನಮ್ಮದು.


ಕಾಮೆಂಟ್‌ಗಳಿಲ್ಲ:

badge