ಶುಕ್ರವಾರ, ಆಗಸ್ಟ್ 21, 2015

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ

ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಸಾಧ್ಯತೆಗಳು 

ಆಧುನಿಕ ಕಂಪ್ಯೂಟರುಗಳಿಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚೆಂದರೆ ಒಂದು ಶತಮಾನದಷ್ಟು ಇತಿಹಾಸವಿದೆ. ಜನಸಾಮಾನ್ಯರು ಮಾಹಿತಿ ತಂತ್ರಜ್ಞಾನದ ಸಂಪರ್ಕಕ್ಕೆ ಬಂದದ್ದಂತೂ ಈಚೆಗೆ, ಕೆಲ ದಶಕಗಳ ಹಿಂದೆಯಷ್ಟೆ. ಇಷ್ಟು ಕಡಿಮೆ ಅವಧಿಯಲ್ಲಿ, ಪ್ರಾಯಶಃ ಬೇರಾವ ಕ್ಷೇತ್ರಕ್ಕೂ ಸಾಧ್ಯವಾಗದಷ್ಟು ಪ್ರಮಾಣದಲ್ಲಿ, ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದದ್ದು ಮಾಹಿತಿ ತಂತ್ರಜ್ಞಾನದ ಹೆಗ್ಗಳಿಕೆಯೆಂದೇ ಹೇಳಬೇಕು.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಿದ್ದ ಸಮಯದಲ್ಲಿ ಅದರ ವ್ಯಾಪ್ತಿ ದೊಡ್ಡದೊಡ್ಡ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯ-ಸಂಶೋಧನಾ ಕೇಂದ್ರಗಳಿಗಷ್ಟೆ ಸೀಮಿತವಾಗಿತ್ತು. ಅಂತಹ ಸಮಯದಲ್ಲಿ ಕಂಪ್ಯೂಟರುಗಳಿಂದ ಏನು ಕೆಲಸವಾಗಬಲ್ಲದು ಎನ್ನುವುದು ಮುಖ್ಯವಾಗಿತ್ತೇ ಹೊರತು ಆ ಕೆಲಸಕ್ಕೆ ಯಾವ ಭಾಷೆಯ ಮಾಧ್ಯಮ ಬಳಕೆಯಾಗಬೇಕು ಎನ್ನುವುದಕ್ಕೆ ಅಷ್ಟೇನೂ ಮಹತ್ವವಿರಲಿಲ್ಲ. ಆ ಸಮಯದಲ್ಲಿ ಕಂಪ್ಯೂಟರ್ ಪ್ರಪಂಚದ ಬಹುಪಾಲು ವ್ಯವಹಾರವೆಲ್ಲ ಇಂಗ್ಲಿಷಿನಲ್ಲೇ ನಡೆಯುತ್ತಿತ್ತು ಎನ್ನಬಹುದು.

ಆನಂತರದ ಸಮಯದಲ್ಲಿ ಮಾಹಿತಿ ತಂತ್ರಜ್ಞಾನದ ಹರವು ಇನ್ನಷ್ಟು ವಿಸ್ತರಿಸಿದಂತೆ ಅದು ಜನಸಾಮಾನ್ಯರ ಸಮೀಪಕ್ಕೂ ಬಂತು. ತಂತ್ರಜ್ಞಾನ ಸಾಮಾನ್ಯರಿಗೂ ಆಪ್ತವಾಗಬೇಕಾದರೆ ಅದು ಜನರ ಭಾಷೆಯನ್ನು ಕಲಿಯಬೇಕೇ ಹೊರತು ಜನರು ತಂತ್ರಜ್ಞಾನದ ಭಾಷೆ ಕಲಿಯುವಂತಾಗಬಾರದು ಎಂಬ ಅಭಿಪ್ರಾಯ ರೂಪುಗೊಂಡಿತು.
ತಂತ್ರಜ್ಞಾನ ಬೆಳೆಯಬೇಕೆಂದರೆ ಅದು ಹೆಚ್ಚುಹೆಚ್ಚು ಜನರನ್ನು ತಲುಪಬೇಕಲ್ಲ, ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಸ್ಥಳೀಯ ಭಾಷೆಗಳನ್ನು ಬಳಸುವ ಪರಿಪಾಠವೂ ಶುರುವಾಯಿತು.

ಹೀಗಾಗಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಇಂಗ್ಲಿಷಿನ ಗಡಿದಾಟಿ ಸ್ಥಳೀಯ ಭಾಷೆಗಳಲ್ಲೂ ದೊರಕುವುದು ಸಾಧ್ಯವಾಯಿತು. ಈ ಪರಿವರ್ತನೆಯ ಹಿಂದೆ ಸಂಸ್ಥೆಗಳು-ಸರಕಾರಗಳಷ್ಟೇ ಅಲ್ಲ, ವೈಯಕ್ತಿಕ ಆಸಕ್ತಿಯಿಂದ ಕಾರ್ಯನಿರತರಾದವರ - ಸಮುದಾಯಗಳ ಕೊಡುಗೆಯನ್ನೂ ನಾವು ಕಾಣಬಹುದು. ಇಂತಹ ಅನೇಕ ಕೊಡುಗೆಗಳ ಕಾರಣದಿಂದಾಗಿ ಮಾಹಿತಿ ತಂತ್ರಜ್ಞಾನದ ಅನೇಕ ಸವಲತ್ತುಗಳನ್ನು ನಾವಿಂದು ಕನ್ನಡ ಭಾಷೆಯಲ್ಲೂ ಬಳಸುವುದು ಸಾಧ್ಯವಾಗಿದೆ. ನಮ್ಮ ಆಪ್ತರಿಗೆ ಕನ್ನಡದಲ್ಲೇ ಇಮೇಲ್ ಸಂದೇಶ ಕಳುಹಿಸುವುದರಿಂದ ಪ್ರಾರಂಭಿಸಿ ವಾಣಿಜ್ಯ ಸಂಸ್ಥೆಗಳ ಲೆಕ್ಕಪತ್ರಗಳನ್ನು ಕನ್ನಡದಲ್ಲೇ ನಿರ್ವಹಿಸುವವರೆಗೆ ಅನೇಕ ಸಾಧ್ಯತೆಗಳು ಇದೀಗ ನಮ್ಮ ಮುಂದಿವೆ.

ಸಾಮಾನ್ಯ ಬಳಕೆದಾರರಲ್ಲಿ ಆಸಕ್ತಿ ಮೂಡಿಸಬಲ್ಲ ಅಂತಹ ಕೆಲ ಸಾಧ್ಯತೆಗಳನ್ನು - ಪ್ರಾತಿನಿಧಿಕವಾಗಿ - ಪರಿಚಯಿಸುವ ಹೊಸ ಸರಣಿ ಮುಂದಿನ ಬುಧವಾರದಿಂದ (ಆಗಸ್ಟ್ ೨೬, ೨೦೧೫) ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಾರಂಭವಾಗುತ್ತಿದೆ. ಓದಿ, ಪ್ರತಿಕ್ರಿಯೆ ನೀಡಿ!

ಈ ಸರಣಿಯಲ್ಲಿ ನೀವು ನೋಡುವುದು ಉದಾಹರಣೆಗಳನ್ನಷ್ಟೇ ಹೊರತು ಕನ್ನಡ ತಂತ್ರಾಂಶ ಸವಲತ್ತುಗಳ ಸಮೀಕ್ಷೆಯನ್ನಾಗಲೀ ಪರಿಪೂರ್ಣ ಪಟ್ಟಿಯನ್ನಾಗಲೀ ಅಲ್ಲ ಎಂದು ದಯಮಾಡಿ ಗಮನಿಸಿ.

2 ಕಾಮೆಂಟ್‌ಗಳು:

Chinnamma Baradhi ಹೇಳಿದರು...

Dear Sir,

Ejnana chennagi moodi baruthide dhanyavaadagalu.

lli english padakke kannada tarjume sikkare thumba upayukathavendu nanna abhipraya.

Ex;"Encryption technology" ge kannadada paryaya pada?.Dayavittu tilisi.


Chinnamma

Chinnamma Baradhi ಹೇಳಿದರು...

Dear Sir,

Ejnana chennagi moodi baruthide dhanyavaadagalu.

lli english padakke kannada tarjume sikkare thumba upayukathavendu nanna abhipraya.

Ex;"Encryption technology" ge kannadada paryaya pada?.Dayavittu tilisi.


Chinnamma

badge