ಗುರುವಾರ, ಆಗಸ್ಟ್ 27, 2015

ಫಿಕಾಮ್ ಎನರ್ಜಿ 653: ಕಡಿಮೆ ಬೆಲೆಯ ಉತ್ತಮ ಮೊಬೈಲ್

ದೇಶದಲ್ಲಿರುವ ಜನರ ಸಂಖ್ಯೆಯ ಜೊತೆಗೆ ಮೊಬೈಲುಗಳ ಸಂಖ್ಯೆಯಲ್ಲೂ ವಿಶ್ವದ ರಾಷ್ಟ್ರಗಳಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ. ಜೀವನಾವಶ್ಯಕ ವಸ್ತುಗಳ ಸಾಲಿನಲ್ಲಿ ಊಟ-ಬಟ್ಟೆ-ಸೂರಿನ ಜೊತೆಗೆ ಮೊಬೈಲ್ ದೂರವಾಣಿಯನ್ನು ಸೇರಿಸುವವರನ್ನೂ ನಾವಿಲ್ಲಿ ಕಾಣಬಹುದು.

ಕಾಲ ಬದಲಾದಂತೆ ತಂತ್ರಜ್ಞಾನವೂ ಬದಲಾಗುವುದು ಸಾಮಾನ್ಯ ತಾನೆ, ಅಂತಹ ಬದಲಾವಣೆಗಳಿಗೆ ಹೊಂದಿಕೊಳ್ಳುವುದರಲ್ಲೂನಾವು ಸದಾ ಮುಂದೆ. ಮೊದಲಿಗೆ ಮೊಬೈಲ್ ಫೋನುಗಳ ಪರಿಚಯವಾದಾಗ, ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದಾಗ, 2G ಹೋಗಿ 3Gಯ ಆಗಮನವಾದಾಗ - ಇಂತಹ ಎಲ್ಲ ಸಂದರ್ಭಗಳಲ್ಲೂ ಕಾಣಿಸಿದ ನಮ್ಮ ಉತ್ಸಾಹ ಮೊಬೈಲ್ ಸಂಸ್ಥೆಗಳ ಮಾರುಕಟ್ಟೆಯನ್ನು ವಿಸ್ತರಿಸಿತ್ತು; ತಂತ್ರಜ್ಞಾನದ ಬೆಳವಣಿಗೆಯನ್ನು ಇನ್ನಷ್ಟು ಪ್ರೋತ್ಸಾಹಿಸಿತ್ತು.

ಇದರಿಂದಾಗಿಯೇ ಏನೋ ಹೊಸ ಉತ್ಪನ್ನಗಳು ಒಂದರ ಹಿಂದೊಂದರಂತೆ ನಮ್ಮ ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ.
ಮೊಬೈಲ್ ಹ್ಯಾಂಡ್‌ಸೆಟ್ಟುಗಳ ಬಗೆಗಂತೂ ಹೇಳುವುದೇ ಬೇಡ: ಅಸಂಖ್ಯಾತ ಮಾದರಿಗಳು ನಮ್ಮ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಕಾಯುತ್ತಿರುತ್ತವೆ. ಇಷ್ಟೆಲ್ಲ ಫೋನುಗಳನ್ನು ತಯಾರಿಸುವವರ ಜೊತೆಗೆ ಸ್ಪರ್ಧಿಸಲು ಹೊಸ ಸಂಸ್ಥೆಗಳೂ ಆಗಿಂದಾಗ್ಗೆ ರಂಗಪ್ರವೇಶ ಮಾಡುತ್ತಿರುತ್ತವೆ.

ಭಾರತದ ಮೊಬೈಲ್ ಮಾರುಕಟ್ಟೆಯನ್ನು ಇತ್ತೀಚೆಗೆ ಪ್ರವೇಶಿಸಿರುವ ಇಂತಹುದೊಂದು ಸಂಸ್ಥೆ ಚೀನಾ ಮೂಲದ ಫಿಕಾಮ್. ಈ ಸಂಸ್ಥೆ ಪರಿಚಯಿಸಿರುವ ‘ಎನರ್ಜಿ 653’ ಎಂಬ ಕಡಿಮೆ ಬೆಲೆಯ ಉತ್ತಮ ಮೊಬೈಲ್ ದೂರವಾಣಿಯ ಪರಿಚಯ ಇಲ್ಲಿದೆ. ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ, ಓದಿ, ಪ್ರತಿಕ್ರಿಯೆ ನೀಡಿ.

>> ಫಿಕಾಮ್ ಎನರ್ಜಿ 653: ಕಡಿಮೆ ಬೆಲೆಯ ಉತ್ತಮ ಮೊಬೈಲ್

ಕಾಮೆಂಟ್‌ಗಳಿಲ್ಲ:

badge