ಮಂಗಳವಾರ, ಏಪ್ರಿಲ್ 21, 2015

ಮೇ ೧೬ರಂದು ಕನ್ನಡ ವಿಜ್ಞಾನ ಬರಹಗಾರರ ಕಾರ್ಯಾಗಾರ

ಇಜ್ಞಾನ ವಾರ್ತೆ

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶಾಸ್ತ್ರಗಳಲ್ಲಿ ಅಭೂತಪೂರ್ವ ಬೆಳವಣಿಗೆಗಳು ನಡೆಯುತ್ತಿವೆ. ಇವುಗಳನ್ನು ಕುರಿತು ಕನ್ನಡದಲ್ಲಿ ಬರೆಯುವವರ ಸಂಖ್ಯೆ ವಿರಳವಾಗಿದೆ.  ವಿಶ್ವಕೋಶಗಳು, ವಿಕಿಪೀಡಿಯಾ, ಪಠ್ಯಪುಸ್ತಕಗಳು,  ಇ-ಪುಸ್ತಕಗಳು, ವಿಜ್ಞಾನ ಪತ್ರಿಕೆಗಳು, ಜನಪ್ರಿಯ ಪತ್ರಿಕೆಗಳಲ್ಲಿ ವಿಜ್ಞಾನ ಲೇಖನಗಳು, ಬ್ಲಾಗ್ ಬರಹಗಳು, ವಿಜ್ಞಾನ ಕಥಾಸಾಹಿತ್ಯ, ... ಹೀಗೆ ವಿಜ್ಞಾನ ಬರಹಗಾರರಿಗೆ ಲಭ್ಯವಾಗಿರುವ ಮಾಧ್ಯಮಗಳು ಹಲವಾರು.

ಕನ್ನಡ ವಿಜ್ಞಾನ ಬರಹಗಾರರು ವ್ಯವಸ್ಥಿತವಾಗಿ ಕೆಲಸ ಮಾಡಿದರೆ ವಿಜ್ಞಾನ ಸಾಹಿತ್ಯವನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಸಾಧ್ಯ ಎಂಬ ಆಶಯದಿಂದ ಮೇ ೧೬ರಂದು ಬೆಂಗಳೂರಿನಲ್ಲಿ ಕನ್ನಡ ವಿಜ್ಞಾನ - ತಂತ್ರಜ್ಞಾನ ಬರಹಗಾರರ ಸಮ್ಮೇಳನ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿಜ್ಞಾನ ಸಂವಹನ ಕ್ಷೇತ್ರದ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಸಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಕಾರ್ಯಕ್ರಮ ಬೆಂಗಳೂರಿನ ಬಾಗ್ಮನೆ ಟೆಕ್ ಪಾರ್ಕ್‌ನಲ್ಲಿರುವ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಚೇರಿಯಲ್ಲಿ ನಡೆಯಲಿದ್ದು bitly.com/knsciworkshop ತಾಣದಲ್ಲಿ ಮುಂಚಿತವಾಗಿಯೇ ನೋಂದಾಯಿಸಿಕೊಂಡ ಆಸಕ್ತರು ಇದರಲ್ಲಿ ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇಲ್ಲ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ knsciworkshop@gmail.com ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ನೋಂದಾಯಿಸಿಕೊಳ್ಳಿ: bitly.com/knsciworkshop
ಈ ಕಾರ್ಯಕ್ರಮದಲ್ಲಿ ಚರ್ಚಿತವಾಗಲಿರುವ ಕೆಲ ವಿಷಯಗಳು ಹೀಗಿವೆ:
ವಿಜ್ಞಾನ ಸಂವಹನ: ಏನು? ಏಕೆ? ಹೇಗೆ?
ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳು
ವಿಶ್ವಕೋಶಗಳಿಗಾಗಿ ಬರವಣಿಗೆ
ವಿಜ್ಞಾನದ ಪತ್ರಿಕಾವರದಿಗಳು
ಸಂವಹನಕ್ಕೆ ಸಿದ್ಧತೆ– ೧: ಬರವಣಿಗೆಗೂ ಮುನ್ನ
ಸಂವಹನಕ್ಕೆ ಸಿದ್ಧತೆ– ೨: ತಂತ್ರಜ್ಞಾನದ ಸವಲತ್ತುಗಳು
ಪುಸ್ತಕಗಳಿಗಾಗಿ ಬರವಣಿಗೆ
ಪುಸ್ತಕಗಳ ಪ್ರಕಾಶನ

ಇದಲ್ಲದೆ ಶಿಬಿರಾರ್ಥಿಗಳು ಲೇಖನವೊಂದನ್ನು ಬರೆದು ಪ್ರಸ್ತುತಪಡಿಸುವ, ಹಾಗೂ ಆ ಲೇಖನದ ಕುರಿತು ಪರಿಣತರಿಂದ ಅಭಿಪ್ರಾಯ ಪಡೆದುಕೊಳ್ಳುವ ಅವಕಾಶವನ್ನು ಕೂಡ ಕಲ್ಪಿಸಲಾಗುವುದು.
ಕಾರ್ಯಕ್ರಮದ ಕುರಿತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: knsciworkshop@gmail.com

ಕಾಮೆಂಟ್‌ಗಳಿಲ್ಲ:

badge