ಮಂಗಳವಾರ, ಡಿಸೆಂಬರ್ 31, 2013

ಹೊಸವರ್ಷಕ್ಕೊಂದು ಹೊಸ ತಾಣ

ಶಾಪಿಂಗ್ - ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಇಷ್ಟವೋ ಕಷ್ಟವೋ, ಅದು ಅನಿವಾರ್ಯವೂ ಹೌದು.

ಅನಿವಾರ್ಯ ಎಂದಮಾತ್ರಕ್ಕೆ ಶಾಪಿಂಗ್ ಸುಲಭದ ಕೆಲಸವೇನೂ ಅಲ್ಲ. ಯಾವುದೇ ವಸ್ತುವಿಗಾಗಿ ಶಾಪಿಂಗ್ ಮಾಡಲು ಹೊರಟಾಗ ಮಾರುಕಟ್ಟೆಯಲ್ಲಿ ಕಾಣಸಿಗುವ ಆಯ್ಕೆಗಳು ನಮ್ಮ ಮನಸಿನಲ್ಲಿ ಹುಟ್ಟುಹಾಕುವ ಗೊಂದಲವೇನು ಸಾಮಾನ್ಯದ್ದೇ?

ಇಂತಹ ಗೊಂದಲದ ಕೆಲವು ಕ್ಷಣಗಳಲ್ಲಿ ನಿಮಗೆ ನೆರವಾಗುವ ಸಣ್ಣದೊಂದು ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡುತ್ತಿದೆ. ೨೦೧೪ರ ಮೊದಲ ದಿನ, ಹೊಸವರ್ಷದ ಶುಭಾಶಯಗಳೊಂದಿಗೆ, 'ಇಜ್ಞಾನ ಶಾಪಿಂಗ್ ಸಂಗಾತಿ'ಯ ಪ್ರಾಯೋಗಿಕ ಆವೃತ್ತಿ ಇಗೊಳ್ಳಿ ನಿಮ್ಮ ಮುಂದಿದೆ.

http://shopping.ejnana.com
ವಿದ್ಯುನ್ಮಾನ ಉಪಕರಣಗಳು, ಗೃಹೋಪಯೋಗಿ ಪರಿಕರಗಳನ್ನೆಲ್ಲ ಕೊಳ್ಳುವಾಗ ನಾವು ಗಮನಿಸಬೇಕಾದ ಅಂಶಗಳನ್ನು ಈ ತಾಣ ನಿಮ್ಮೊಡನೆ ಹಂಚಿಕೊಳ್ಳಲಿದೆ. ಡಿಜಿಟಲ್ ಕ್ಯಾಮೆರಾ, ಲ್ಯಾಪ್‌ಟಾಪ್‌ಗಳಿಂದ ಪ್ರಾರಂಭಿಸಿ ವಾಟರ್ ಹೀಟರ್, ಫ್ರಿಜ್‌ವರೆಗೆ ಅನೇಕ ಉಪಕರಣ-ಪರಿಕರಗಳನ್ನು ಕುರಿತಾದ ಟಿಪ್ಸ್ ಈ ತಾಣದಲ್ಲಿ ಕಾಣಿಸಿಕೊಳ್ಳಲಿದೆ.

ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗುತ್ತದೆಂದು ನಾವು ಭಾವಿಸುತ್ತೇವೆ. ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ, ಹಾಗೂ ಮತ್ತೊಮ್ಮೆ ಹೊಸವರ್ಷದ ಶುಭಾಶಯಗಳು.
- ಇಜ್ಞಾನ ಡಾಟ್ ಕಾಮ್
ಸದ್ಯ ಈ ತಾಣದಲ್ಲಿರುವ ಬರಹಗಳನ್ನು ತನ್ನ 'ವಿತ್ತವಾಣಿ' ಪುರವಣಿಯಲ್ಲಿ ಪ್ರಕಟಿಸಿರುವ ವಿಜಯವಾಣಿ ಪತ್ರಿಕೆಗೆ ನಮ್ಮ ಕೃತಜ್ಞತೆಗಳು.

2 ಕಾಮೆಂಟ್‌ಗಳು:

ಮೋಹನ್ ತಲಕಾಲುಕೊಪ್ಪ ಹೇಳಿದರು...

I liked your idea and the website. Very innovative and nicely designed. Keep it up.

ಮೋಹನ್ ತಲಕಾಲುಕೊಪ್ಪ ಹೇಳಿದರು...

Excellent. Liked the idea and the website. Nicely designed with useful info. Keep it up

badge