ಸೋಮವಾರ, ಫೆಬ್ರವರಿ 4, 2013

ಗುಲಬರ್ಗಾದಲ್ಲಿ ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶ

ಇಜ್ಞಾನ ವಾರ್ತೆ

ಜನಪ್ರಿಯ ವಿಜ್ಞಾನ ಸಾಹಿತಿಗಳ ರಾಜ್ಯಮಟ್ಟದ ಆರನೇ ಸಮಾವೇಶ ಬರುವ ಫೆಬ್ರುವರಿ ೧೬ ಹಾಗೂ ೧೭ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಗುಲಬರ್ಗಾದ ನೂತನ ವಿದ್ಯಾಲಯ ಕಾಲೇಜಿನ ಅನಂತರಾವ್ ದೇಶ್‌ಮುಖ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಎರಡು ದಿನಗಳ ಈ ಸಮಾವೇಶದಲ್ಲಿ ಮಂಡಿಸಲಾಗುವ ಪ್ರಬಂಧಗಳನ್ನು `ವಿಜ್ಞಾನ ಸಂವಹನ: ೩ನೇ ಆಯಾಮ' ಎಂಬ ಹೆಸರಿನ ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು.

ಕಾರ್ಯಕ್ರಮದ ಸಂಕ್ಷಿಪ್ತ ವಿವರಗಳು ಹೀಗಿವೆ:

ಫೆಬ್ರುವರಿ ೧೬, ೨೦೧೩: 

ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭ, ಪುಸ್ತಕ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ. ಅಧ್ಯಕ್ಷತೆ: ಡಾ|| ಪಿ.ಎಸ್. ಶಂಕರ್. ಉಪಸ್ಥಿತಿ: ಡಾ. ನಾ. ಸೋಮೇಶ್ವರ, ಡಾ|| ಸಿದ್ಧಲಿಂಗಯ್ಯ ಮತ್ತಿತರರು. ಸನ್ಮಾನಿತರು: ಡಾ|| ಎನ್.ಎಸ್. ಲೀಲಾ, ಡಾ|| ಎಚ್.ಡಿ. ಚಂದ್ರಪ್ಪಗೌಡ, ಶ್ರೀ ವಿ.ಬಿ. ಬಡಿಗೇರ ಹಾಗೂ ಶ್ರೀ ಹ.ಶಿ. ಭೈರನಟ್ಟಿ

ಮಧ್ಯಾಹ್ನ ೧೨ ಗಂಟೆಗೆ 'ಯುವಜನತೆ ಮತ್ತು ಸಂವಹನ' ಗೋಷ್ಠಿ. ಭಾಗವಹಿಸುವವರು ಶ್ರೀಮತಿ ಸರೋಜ ಪ್ರಕಾಶ್, ಡಾ|| ಎ.ಪಿ. ರಾಧಾಕೃಷ್ಣ, ಶ್ರೀ ಟಿ.ಜಿ. ಶ್ರೀನಿಧಿ ಹಾಗೂ ಡಾ|| ಎಸ್. ಬಸವರಾಜಪ್ಪ. ಅಧ್ಯಕ್ಷತೆ :  ಪ್ರೊ|| ಎಸ್.ವಿ. ಸಂಕನೂರ

ಮಧ್ಯಾಹ್ನ ೩ ಗಂಟೆಗೆ `ಶ್ರೀ ಬಿ.ಪಿ. ರಾಧಾಕೃಷ್ಣ - ಬದುಕು-ಬರಹ' ಗೋಷ್ಠಿ. ಭಾಗವಹಿಸುವವರು ಶ್ರೀ ಟಿ. ಆರ್. ಅನಂತರಾಮು ಹಾಗೂ ಡಾ|| ಎಚ್. ಚಂದ್ರಶೇಖರ್. ಅಧ್ಯಕ್ಷತೆ :  ಡಾ|| ಏ.ಓ. ಆವಲಮೂರ್ತಿ

ಸಂಜೆ ೪:೩೦ಕ್ಕೆ `ಹುಲಿ ಉಳಿಸುವ ದಾರಿ' ಚಲನಚಿತ್ರ ಪ್ರದರ್ಶನ. ನಿರ್ದೇಶನ: ಶ್ರೀ ಶೇಖರ್ ದತ್ತಾತ್ರಿ. ಕನ್ನಡ ಅನುವಾದ: ಡಾ. ಕೆ. ಉಲ್ಲಾಸ್ ಕಾರಂತ ಹಾಗೂ ಶ್ರೀ ಟಿ. ಎಸ್. ಗೋಪಾಲ್

ಫೆಬ್ರುವರಿ ೧೭, ೨೦೧೩:

ಬೆಳಿಗ್ಗೆ ೧೦ ಗಂಟೆಗೆ 'ಶ್ರಾವ್ಯ ಮಾಧ್ಯಮ ಮತ್ತು ವಿಜ್ಞಾನ' ಗೋಷ್ಠಿ. ಭಾಗವಹಿಸುವವರು ಶ್ರೀಮತಿ ಸುಮಂಗಲ ಮುಮ್ಮಿಗಟ್ಟಿ, ಡಾ|| ಸದಾನಂದ ಪೆರ್ಲ, ಶ್ರೀ ಸೋಮಶೇಖರ ರೂಳಿ ಹಾಗೂ ಡಾ|| ಪ್ರಾಣೇಶ್ ಗುಡೂರು. ಅಧ್ಯಕ್ಷತೆ: ಡಾ|| ವಿ.ಎನ್. ನಾಯಕ್

ಮಧ್ಯಾಹ್ನ ೧೨:೩೦ಕ್ಕೆ ಪ್ರೊ| ಎ.ಎಚ್. ರಾಜಾಸಾಬ್ ಅವರಿಂದ ವಿಶೇಷ ಉಪನ್ಯಾಸ

ಮಧ್ಯಾಹ್ನ ೨ ಗಂಟೆಗೆ 'ಪರಿಸರ ವಿಜ್ಞಾನ: ಸಂವಹನ ಹಾಗೂ ಸವಾಲುಗಳು' ಗೋಷ್ಠಿ. ಭಾಗವಹಿಸುವವರು ಪ್ರೊ|| ಸಿ.ಡಿ. ಪಾಟೀಲ, ಡಾ|| ಎಸ್.ಜಿ. ಶ್ರೀಕಂಠೇಶ್ವರ ಸ್ವಾಮಿ, ಶ್ರೀ ಎನ್.ಪಿ. ಶ್ರೀಕಾಂತ, ಶ್ರೀ ಸಿ. ಯತಿರಾಜು. ಅಧ್ಯಕ್ಷತೆ :  ಶ್ರೀ. ಬಿ.ಎಸ್. ಸೊಪ್ಪಿನ

ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ.

1 ಕಾಮೆಂಟ್‌:

ಬೇಳೂರು ಸುದರ್ಶನ ಹೇಳಿದರು...

ಎಲ್ಲವೂ ಸರಿ. ಆದರೆ ಈ ಸಭೆಗಳಲ್ಲಿ ಭಾಗವಹಿಸುವ ಆಡಿಯೆನ್ಸ್‌ ಯಾರು?

badge