ಸೋಮವಾರ, ಮಾರ್ಚ್ 7, 2011

ವಿಶ್ವಕನ್ನಡ ಸಮ್ಮೇಳನದಲ್ಲಿ ವಿಜ್ಞಾನ-ತಂತ್ರಜ್ಞಾನ

ಇ-ಜ್ಞಾನ ವಾರ್ತೆ

ಮಾರ್ಚ್ ಹನ್ನೊಂದರಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ 'ಜ್ಞಾನ - ವಿಜ್ಞಾನ - ತಂತ್ರಜ್ಞಾನ - ಕರ್ನಾಟಕ' ಎಂಬ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ.
ಪ್ರೊ. ಎಂ ಐ ಸವದತ್ತಿಯವರು ಉದ್ಘಾಟಿಸಲಿರುವ ಈ ವಿಚಾರಸಂಕಿರಣಕ್ಕೆ ಡಾ ಕೆ ಚಿದಾನಂದಗೌಡರ ಅಧ್ಯಕ್ಷತೆ ಇದೆ. ಡಾ ಸಿ ಆರ್ ಚಂದ್ರಶೇಖರ್, ಡಾ ಯು ಬಿ ಪವನಜ, ಡಾ ಶ್ರೀನಿವಾಸರಾವ್ ಕುಂಟೆ ಹಾಗೂ ಡಾ ಡಿ ಆರ್ ಬಳೂರಗಿ ಅವರು ವಿಷಯ ಮಂಡನೆ ಮಾಡಲಿದ್ದಾರೆ. ಡಾ ಪಿ ಎಸ್ ಶಂಕರ್, ಡಾ ನಾ ಸೋಮೇಶ್ವರ, ಡಾ ಎ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಆಮಂತ್ರಣ ಪತ್ರ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಕಾಮೆಂಟ್‌ಗಳಿಲ್ಲ:

badge